ದಿನದ ಸುದ್ದಿ
ದಿಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಡೈರಿ ಸುಳಿವು
ದಿಲ್ಲಿಯ ಸಂತ ನಗರ್‍ನ ಮನೆಯೊಂದರಲ್ಲಿ ಹನ್ನೊಂದು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯಲ್ಲಿ ಸಿಕ್ಕ ಡೈರಿಯೊಂದು ಸುಳಿವು ನೀಡಿದೆ.
ಸುದ್ದಿದಿನ ಡೆಸ್ಕ್: ದಿಲ್ಲಿಯ ಸಂತ ನಗರ್‍ನ ಮನೆಯೊಂದರಲ್ಲಿ ಹನ್ನೊಂದು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯಲ್ಲಿ ಸಿಕ್ಕ ಡೈರಿಯೊಂದು ಸುಳಿವು ನೀಡಿದೆ.
ದಿಲ್ಲಿ ಪೊಲೀಸರು ಈ ಡೈರಿಯನ್ನು ಪರಿಶೀಲಿಸುತ್ತಿದ್ದು, ಘಟನೆ ಸಂಭವಿಸಿದ ಆ ರಾತ್ರಿ ಏನಾಯಿತು ಎಂಬ ಅಂಶಗಳು ದಾಖಲಾಗಿವೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಡೈರಿ ಕುರಿತ ಸುಳಿವು ನೀಡಿತ್ತು. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ ಮಹತ್ವದ ಅಂಶಗಳನ್ನು ಸಂಗ್ರಹಿಸಿದ್ದಾರೆ.
ಮೃತರಲ್ಲಿ ಒಬ್ಬನಾದ ಹನ್ನೆರಡು ವರ್ಷದ ಲಲಿತ್‍ನ ಮೇಲೆ ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದ ಆತನ ತಂದೆ ಗೋಪಾಲ್ ದಾಸ್ ಭಾಟಿಯಾ ಅವರ ಆತ್ಮ ಸೇರಿಕೊಂಡಿತ್ತು ಎಂದು ಮನೆಯವರೆಲ್ಲ ನಂಬಿದ್ದರು ಎಂಬುದಲ್ಲಿ ಲಲಿತ್ ತನ್ನ ಡೈರಿಯಲ್ಲಿ ದಾಖಲಿಸಿದ್ದಾನೆ. ಅಲ್ಲದೇ, ತನ್ನ ತಂದೆ ಮೈ ಮೇಲೆ ಬಂದು ಏನೆಲ್ಲಾ ಆಜ್ಞೆ ನೀಡುತ್ತಿದ್ದರು ಎಂಬುದಾಗಿಯೂ ಆತ ಡೈರಿಯಲ್ಲಿ ಉಲ್ಲೇಖಿಸಿದ್ದಾನೆ.
ಸಾಮೂಹಿಕ ಆತ್ಮಹತ್ಯೆ ನಡೆದ ದಿನ ರಾತ್ರಿ ರೆಸ್ಟೋರೆಂಟ್‍ವೊಂದರಿಂದ ರೋಟಿ ತರಿಸಲಾಗಿತ್ತು. ಅದಕ್ಕೆ 200 ರೂಪಾಯಿ ಖರ್ಚಾಗಿದೆ ಎಂದು ಡೈರಿಯಲ್ಲಿ ದಾಖಲಾಗಿದೆ. ರೆಸ್ಟೋರೆಂಟ್‍ನ ಬಿಲ್ ಕೂಡ ಆ ಡೈರಿಯಲ್ಲಿತ್ತು ಎಂದೂ ತಿಳಿದುಬಂದಿದೆ.
ದಿಲ್ಲಿಯ ಸಂತನಗರದಲ್ಲಿ ಹನ್ನೊಂದು ಜನರ ಸಾಮೂಹಿದಕ ಆತ್ಮಹತ್ಯೆ ನಡೆದಿತ್ತು. ಇದರಲ್ಲಿ 12 ವರ್ಷದ ಬಾಲಕನಿಂದ 75 ವರ್ಷದ ವೃದ್ಧೆ ತನಕ ಇದ್ದಾರೆ. ವೃದ್ಧೆಯ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಮಿಕ್ಕ ಹತ್ತು ಜನರ ಕೈಗೆ ಹಗ್ಗ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ನೇಣು ಬಿಗಿಯಲಾಗಿದೆ. ಬಹುಶಃ ಇದು ಕೊಲೆ ಪ್ರಕರಣವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ತಿಳಿದುಬಂದಿದೆ.