ರಾಜಕೀಯ

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಆಯ್ಕೆ | ಎದುರಿಸಬೇಕಾದ ಸವಾಲುಗಳು

Published

on

ಸುದ್ದಿದಿನ, ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಯಾರನ್ನು ನೇಮಿಸುತ್ತದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಹಿಂದೆ ಸಚಿವ ಡಿಕೆಶಿ ಅವರ ಹೆಸರು ಈ ವಿಚಾರವಾಗಿ ತುಂಬಾ ಕೇಳಿಬಂದಿತ್ತು. ಸಮ್ಮಿಶ್ರ ಸರ್ಕಾರವಿರುವ ಈ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಕೇವಲ ಲೋಕಸಭೆ ಚುನಾವಣೆಗೆ 6 ತಿಂಗಳು ಬಾಕಿಯಿದ್ದು, ದಿನೇಶ್ ಗುಂಡೂರಾವ್ ನೇಮಕಗೊಂಡಿರುವ ಈ ಸಂದರ್ಭದಲ್ಲಿ, ಅವರು ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನ ಗೆಲ್ಲಿಸುವ ಸವಾಲನ್ನು ಎದುರಿಸ ಬೇಕಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ‌ಕೂಡ ಮುಂದುವರಿಯಲಿದ್ದು, ಅಭ್ಯರ್ಥಿಗಳ ಆಯ್ಕೆ ಸೀಟು ಹಂಚಿಕೆ ಮತ್ತು ಚುನಾವಣಾ ಪ್ರಚಾರ ಹಾಗೂ ಇನ್ನೂ ಹಲವು ವಿಚಾರಗಳಲ್ಲಿ ದಿನೇಶ್ ಗುಂಡೂರಾವ್ ಎಚ್ಚರಿಕೆಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳ ಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version