ರಾಜಕೀಯ
ಅನಂತ ಕುಮಾರ್ ಹೆಗಡೆ ಅತ್ಯಂತ ಕಳಪೆ ಮಟ್ಟದ ಸಂಸದ : ದಿನೇಶ್ ಗುಂಡೂರಾವ್ ಕಿಡಿ
ಸುದ್ದಿದಿನ,ಚಾಮರಾಜನಗರ : ಅತ್ಯಂತ ಕಳಪೆ ಸಂಸದ ಅನಂತ್ ಕುಮಾರ್ ಹೆಗಡೆ ಈ ಬಾರಿ ಅವರನ್ನ ಹೀನಾಯವಾಗಿ ಸೋಲಿಸಿ ಉತ್ತರ ಕರ್ನಾಟಕದವರು ಅವರನ್ನ ಮನೆಗೆ ಕಳುಹಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಚಾಮರಾಜನಗರದಲ್ಲಿ ಇಂದು ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಮಾತುಗಳು ದ್ವೇಷವನ್ನ ಸೃಷ್ಡಿಸುತ್ತವೆ.ಉತ್ತರ ಕರ್ನಾಟಕ ಕಾಂಗ್ರೆಸ್ ಮುಕ್ತ ಮಾಡುತ್ತಾರೆನ್ನುವ ಉಡಾಫೆಯ ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಅಂಬರೀಶ್ ಕೂಡ ಕಾಂಗ್ರೆಸ್ ನಾಯಕರಾಗಿದ್ದರು, ಹಾಗಾಗಿ ಸುಮಲತ ಜೊತೆ ಮಾತನಾಡುತ್ತೇನೆ.ಮಲ್ಲಿಕಾರ್ಜುನ ಖರ್ಗೆ ಕೋಲಾರದಲ್ಲಿ ಸ್ಪರ್ದೇ ಮಾಡುತ್ತಾರೆನ್ನುವುದು ಊಹಾಪೋಹ. ಅವರು ಅಲ್ಲೆ ಸ್ಪರ್ದೆ ಮಾಡುತ್ತಾರೆ. ಅತಿ ಶೀಘ್ರದಲ್ಲೆ ದೊಡ್ಡ ಸಮಾವೇಶ ನಡೆಯಲಿದೆ. ತುಮಕೂರಿನ ವಿಚಾರದಲ್ಲಿ ಮುದ್ದಹನುಮೇಗೌಡರ ಜೊತೆ ಮಾತನಾಡುತ್ತೇವೆ. ಹಾಸನದ ಎ ಮಂಜು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಸ್ಷಷ್ಟನೆ ನೀಡಿದರು.
28 ಸಂಸದರಲ್ಲಿ ಹೆಚ್ಚು ಅಂತರದಲ್ಲಿ ಗೆಲ್ಲುವವರು ಆರ್ ಧೃವನಾರಾಯಣ್. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಬಿಜೆಪಿಯಿಂದ ಯಾರೇ ನಿಂತರೂ ಧೃವನಾರಾಯಣ್ ಗೆಲ್ಲುತ್ತಾರೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401