/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಎಚ್‍ಡಿಎಫ್‍ಸಿ ಬ್ಯಾಂಕ್ ಸಿಇಒ ಸಂಬಳ ಕಟ್

Published

on

ಸುದ್ದಿದಿನ ಡೆಸ್ಕ್: ಭಾರತದ ಬ್ಯಾಂಕರ್‍ಗಳ ಪೈಕಿ ಅತಿ ಹೆಚ್ಚು ಸಂಬಳ ಪಡೆಯುತ್ತಾರೆ ಎಂಬ ಕೀರ್ತಿಗೆ ಪಾತ್ರರಾಗಿದ್ದ ಎಚ್‍ಡಿಎಫ್‍ಸಿ ಬ್ಯಾಂಕ್‍ನ ಕಾರ್ಯ ನಿರ್ವಾಹಕ ಅಧಿಕಾರಿ ಆದಿತ್ಯ ಪುರಿ ಅವರ ಸಂಬಳದಲ್ಲಿ ಸ್ವಲ್ಪ ಕಡಿತವಾಗಿದೆ.

ಕಳೆದ ವರ್ಷವಷ್ಟೆ ಹತ್ತು ಕೋಟಿ ರೂಪಾಯಿ ಸಂಬಳ ಪಡೆದಿದ್ದ ಅವರು ಈ ಆರ್ಥಿಕ ವರ್ಷದಲ್ಲಿ 9.6 ಕೋಟಿ ರೂಪಾಯಿ ವಾರ್ಷಿಕ ಸಂಭಾವನೆ ಪಡೆದಿದ್ದಾರೆ. ಇದರ ಹೊರತಾಗಿಯೂ ಬ್ಯಾಂಕ್‍ನಲ ಈ ವರ್ಷದ ಲಾಭ 17,487 ಕೋಟಿ ರೂಪಾಯಿಗೆ ತಲುಪಿದೆ.

ಆರ್‍ಬಿಐನ ಆದೇಶದಂತೆ ಸಾಲ ವಸೂಲಿ ಮಾಡಲು ಸಾಧ್ಯವಾಗದ ಕಾರಣ ಈ ಬಾರಿ ಅವರ ಸಂಬಳ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕಳದ ವರ್ಷ ಬ್ಯಾಂಕ್‍ನ ಕಾರ್ಯ ನಿರ್ವಹಣೆಯಿಂದಾಗಿ 92 ಲಕ್ಷ ರೂಪಾಯಿ ಬೋನಸ್ ಸಿಕ್ಕಿತ್ತು ಎಂದು ತಿಳಿದುಬಂದಿದೆ.

ಅಂದಹಾಗೆ ಕೋಟಕ್ ಬ್ಯಾಂಕ್ ಸಿಇಒ ಉದಯ್ ಕೋಟಕ್ ಅವರು ಕಳೆದ ವರ್ಷ 2.63 ಕೋಟಿ ಸಂಬಳ ಪಡೆದಿದ್ದರು. ಈ ಬಾರಿ ಅವರ ಸಂಭಾವನೆ 2.92 ಕೋಟಿ ರೂ. ತಲುಪಿದೆ.

ಯೆಸ್ ಬ್ಯಾಂಕ್ ಸಿಇಒ ರಾಣಾ ಕಪೂರ್ ಅವರು ಕಳೆದ ವರ್ಷ 6.81 ಕೋಟಿ ಸಂಭಾವನೆ ಪಡೆದಿದ್ದರು. ಈ ವರ್ಷ 5.35 ಕೋಟಿ ರೂ.ಗೆ ಕುಸಿದಿದೆ. ಇನ್ನು ಆಕ್ಸಿಸ್ ಬ್ಯಾಂಕ್ ಸಿಇಒ ಶಿಖಾ ಶರ್ಮಾ ಅವರು ಕಳೆದ ವರ್ಷ 2.94 ಕೋಟಿ ರೂ. ವೇತನ ಪಡೆದಿದ್ದರು. ಈ ವರ್ಷ ಅವರ ಸಂಬಳ 2.9 ಕೋಟಿ ಇದೆ. ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚರ್ ಅವರ ಸಂಬಳ ಕಳೆದ ವರ್ಷ 5.54 ಕೋಟಿ ರೂ. ಇತ್ತು. ಈ ವರ್ಷದ ವೇತನ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

Trending

Exit mobile version