ದಿನದ ಸುದ್ದಿ

ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಗೊಗೋಯಿ ಹೆಸರು ಶಿಫಾರಸು

Published

on

ಸುದ್ದಿದಿನ ಡೆಸ್ಕ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಅಸ್ಸಾಂ ಮೂಲದ ರಂಜನ್ ಗೊಗೋಯಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಈ ಮೂಲಕ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಸುಧಾರಿಸುವ ಲಕ್ಷಣಗಳು ನಿಚ್ಛಳವಾಗಿ ಗೋಚರಿಸಿವೆ.

ಹಾಲಿ ಸಿಜೆಐ ದೀಪಕ್ ಮಿಶ್ರಾ ಅವರೇ ಗೊಗೋಯಿ ಅವರ ಹೆಸರನ್ನು ಶಿಫಾರಸು ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಅಂಗೀಕರಿಸುವ ಸಾಧ್ಯತೆಗಳಿವೆ.

Read this: ಬಿಜೆಪಿ ವಿರುದ್ಧ ಕೂಗಿದ ವಿದ್ಯಾರ್ಥಿನಿ ನ್ಯಾಯಾಂಗ ವಶಕ್ಕೆ

ಸುಪ್ರೀಂ ಕೋರ್ಟ್‍ನ ತೀರ್ಪುಗಳಲ್ಲಿ ರಾಜಕೀಯ ಪಿತೂರಿ ಹಾಗೂ ಕೇಂದ್ರದ ಮಧ್ಯಪ್ರವೇಶಮಾಡುತ್ತಿದೆ ಎಂದು ಆರೋಪಿಸಿ ಗೊಗೋಯಿ ಸೇರಿದಂತೆ ಐವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿ, ಪರಮೋಚ್ಛ ನ್ಯಾಯಾಲಯದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಬಿಚ್ಚಿಟ್ಟಿದ್ದರು. ಅಲ್ಲದೇ ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧವೇ ಆರೋಪ ಹೊರಿಸಲಾಗಿತ್ತು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಯಾಗಿರುವ ಕೆಲವು ಪ್ರಕರಣಗಳಿಗೆ ನೇಮಕವಾಗಿದ್ದ ನ್ಯಾಯಮೂರ್ತಿಗಳನ್ನು ಬದಲಾಯಿಸಲಾಗಿತ್ತು. ಕೆಲವು ಪ್ರಕರಣಗಳಲ್ಲಿ ಸೇವಾ ಹಿರಿತನವನ್ನು ಪರಿಗಣಿಸದೆ ನಿಯಮಗಳನ್ನೂ ಮೀರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿತ್ತು ಎಂದು ಸುಪ್ರಿಂ ಕೋರ್ಟ್‍ನ ಐವರು ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದ್ದರು. ಇದು ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು.

 

Leave a Reply

Your email address will not be published. Required fields are marked *

Trending

Exit mobile version