ದಿನದ ಸುದ್ದಿ

ಭತ್ತದ‌ ಎಲೆ ಕವಚ ಒಣಗುವ ರೋಗದ ನಿರ್ವಹಣಾ ಕ್ರಮಗಳು

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಬೆಳೆಯು ವಿವಿಧ ಹಂತಗಳಲ್ಲಿದ್ದು, ಅಲ್ಲಲ್ಲಿ ಎಲೆ ಕವಚ ಒಣಗುವ ರೋಗವು ಕಾಣಿಸಿಕೊಂಡಿದೆ. ಆದ್ದರಿಂದ ರೈತ ಬಾಂಧವರು ತಕ್ಷಣವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.

ಹಾನಿಯ ಲಕ್ಷಣಗಳು

ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುತ್ತವೆ. ಕೆರೆ ಕೆಳಗಿನ ಅಥವಾ ನೀರಿನ ಒತ್ತಡ ಇರುವ ತಗ್ಗು ಪ್ರದೇಶದ ಗದ್ದೆಗಳಲ್ಲಿ ರೋಗದ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ನಿರ್ವಹಣಾ ಕ್ರಮಗಳು

ನೀರು ಹರಿಸುವಾಗ ಜೊತೆಯಲ್ಲಿ ಸಗಣಿ ರಾಡಿ ಬಿಡುವುದು ಸೂಕ್ತ. ಸಗಣಿ ರಾಡಿ ಜೊತೆಯಲ್ಲಿ ಟ್ರೈಕೋಡರ್ಮಾವನ್ನು ಬೆರೆಸಿ ಬಿಡುವುದು ತುಂಬಾ ಉಪಯುಕ್ತ. ಸಗಣಿ ರಾಡಿಯ ಉಪಚಾರ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. 1 ಗ್ರಾಂ. ಕಾರ್ಬನ್‍ಡೈಜಿಂ 50 ಡಬ್ಲ್ಯುಪಿ ಅಥವಾ 1 ಮಿ.ಲೀ. ಪ್ರೊಪಿಕೊನೊಜೋಲ್ 25 ಇ.ಸಿ. ಅಥವಾ 2 ಮಿ.ಲೀ. ಹೆಕ್ಸಾಕೋನಜೋಲ್ 5 ಇ.ಸಿ. ಯನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ 0.4 ಗ್ರಾಂ. ಟ್ರೈಶ್ಲಾಕ್ಸಿಸ್ಟ್ರೋಬಿನ್ 25 ಮತ್ತು 0.4 ಗ್ರಾಂ. ಟೆಬುಕೊನಜೋಲ್ 50 ಅನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಇವೆರಡರ ಸಂಯುಕ್ತ ರಾಸಾಯನಿಕ ಲಭ್ಯವಿದ್ದಲ್ಲಿ ಸಿಂಪರಣೆ ಮಾಡುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version