ದಿನದ ಸುದ್ದಿ

‘ಪರಿಷ್ಕೃತ ಪಠ್ಯಪುಸ್ತಕ’ದಲ್ಲಿ ಕನಕದಾಸರ ಕಡೆಗಣನೆ: ಸತ್ಯಗಳನ್ನು ತಿರುಚುವ ಕುತಂತ್ರಕ್ಕೆ ಕಾಗಿನಲೆ ಶ್ರೀ ಆಕ್ರೋಶ

Published

on

ಸುದ್ದಿದಿನ,ಬೆಂಗಳೂರು: ರೋಹಿತ್ ಚಕ್ರ ತೀರ್ಥ ಅಧ್ಯಕ್ಷತೆಯ ಪರಿಷ್ಕೃತ ಪಠ್ಯಪುಸ್ತಕ ದಲ್ಲಿ ದಾಸ ಶ್ರೇಷ್ಠ ಕನಕದಾಸರನ್ನು ಕಡೆಗಣಿಸಿದ್ದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕನಕ ಗುರುಪೀಠ ನಿರಂಜಾನಾನಂದಪುರಿ ಸ್ವಾಮೀಜಿ ಅವರು ಮನವಿ ಸಲ್ಲಿಸಿ ಮೊದಲಿನ ಪಠ್ಯ ಪುಸ್ತಕ ಮುಂದುವರೆಸುವಂತೆ ಒತ್ತಾಯಿಸಿದರು.

ಈ ಮೊದಲು ತತ್ಪೂರ್ವ 9 ನೇ ತರಗತಿ ಸಮಾಜ ವಿಜ್ಞಾನದಲ್ಲಿ ಕನಕದಾಸರ ಕುರಿತು ಒಂದು ಪುಠ ಇತ್ತು. ಪರಿಷ್ಕೃತ ಪಠ್ಯಪುಸ್ತಕ ದಲ್ಲಿ ಒಂದು ಸಾಲಿಗೆ ಸೀಮಿತ ಮಾಡಿದ್ದಾರೆ. ಸಾಂಸ್ಕೃತಿಕ ಸತ್ಯಗಳನ್ನು ತಿರುಚುವ ಕುತಂತ್ರವನ್ನು ಖಂಡಿಸುತ್ತೇನೆ ಸ್ವಾಮೀಜಿ ಕಿಡಿಕಾರಿದರು.

ದಾಸಶ್ರೇಷ್ಠ ಕನಕದಾಸರ ಜೀವನ ಚರಿತ್ರೆ ಈ ಹಿಂದೆ ಇದ್ದ ಹಾಗೆ ಮರಳಿ ಪ್ರಕಟಣೆ ಮಾಡಬೇಕು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version