ದಿನದ ಸುದ್ದಿ

ಅಪಘಾತದಿಂದ ಮೃತನಾದ ವ್ಯಕ್ತಿಯ ಹೆಂಡತಿಗೆ ಪರಿಹಾರ ಚೆಕ್ ವಿತರಣೆ

Published

on

ಸುದ್ದಿದಿನ,ಹೊಸಪೇಟೆ(ವಿಜಯನಗರ): ಹೊಸಪೇಟೆ ವಿಭಾಗದ ಹಡಗಲಿ ಘಟಕದ ವಾಹನ ಸಂ: ಕೆ.ಎ-35/ಎಫ್-373 ವಾಹನವು ವೀರಾಕೊರನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯ ಹತ್ತಿರ ಮರಣಾಂತಿಕ ಅಪಘಾತಕ್ಕೀಡಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದ ವತಿಯಿಂದ ಅಪಘಾತದಲ್ಲಿ ಪ್ರಯಾಣಿಕ ದೊಡ್ಡನಿಂಗಪ್ಪ ಅವರು ಮೃತಪಟ್ಟ ಹಿನ್ನಲೆಯಲ್ಲಿ ಮೃತರ ಹೆಂಡತಿ ಟಿ.ಮಾಳಮ್ಮ ಅವರಿಗೆ ಸಂಸ್ಥೆಯ ಅಪಘಾತ ಪರಿಹಾರ ನಿಧಿಯಿಂದ ರೂ.2.50 ಲಕ್ಷಗಳ ಮೊತ್ತದ ಚೆಕನ್ನು ಬುಧವಾರದಂದು ಹೊಸಪೇಟೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾದ ಡಿ.ಕೊಟ್ರಪ್ಪ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ವಿಭಾಗೀಯ ತಾಂತ್ರಿಕ ಅಭಿಯಂತರ ಎಸ್.ಆಲ್ತಾಫ್ ಹುಸೇನ್, ವಿಭಾಗೀಯ ಸಂಚಾರ ಅಧಿಕಾರಿಯಾದ ಕೆ.ಬಸವರಾಜ, ಸಹಾಯಕ ಲೆಕ್ಕಾಧಿಕಾರಿಯಾದ ಚಿತ್ತವಾಡಿಗೆಪ್ಪ.ಎಸ್ ಹಾಗೂ ಸಿಬ್ಬಂದಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version