ರಾಜಕೀಯ
ಸಿದ್ದು ಹೇಳಿಕೆ ಅಧಿಕೃತ ಅಲ್ಲ: ಡಿಕೆಶಿ
ಸುದ್ದಿದಿನ ಡೆಸ್ಕ್: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಮಾತನ್ನು ಕಿಡಿಗೇಡಿಗಳು ವಿಡಿಯೊ ಮಾಡಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಅವು ಅಧಿಕೃತ ಎಂದು ಒಪ್ಪಿಕೊಳ್ಳಲು ಆಗದು ಎಂದಿದ್ದಾರೆ.
ವ್ಯಕ್ತಿ ಪೂಜೆ ನಿಲ್ಲಿಸಿ. ಪಕ್ಷದ ಪೂಜೆ ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಕೆ ಕುರಿತು ಖಾಸಗಿಯಾಗಿ ಹೇಳಿದ್ದ ಸಿದ್ದರಾಮಯ್ಯ ಹೇಳಿಕೆ ಸಚಿವ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
Read This: ಸಿದ್ದು ಸಲಹೆ ತಿರಸ್ಕರಿಸಿದ ದೊಡ್ಡ ಗೌಡ್ರು !
ಸಮ್ಮಿಶ್ರ ಸರ್ಕಾರ ಐದು ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸುತ್ತದೆ. ಯಾರು ಪಕ್ಷದ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಇದು ನನಗೂ ಅನ್ವಯಿಸುತ್ತೆ. ಎಲ್ಲರಿಗೂ ಅನ್ವಯಿಸುತ್ತೆ’ಎಂದು ಖಡಕ್ಕಾಗಿ ಹೇಳಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಬೇಕು ಎಂದು ಪಕ್ಷದ ರಾಷ್ಟರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ ಎಂದರು.
ಬಜೆಟ್ ದಿನ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ನೊಣವಿನಕೆರೆ ಮಠದಲ್ಲಿ ಅಂದು ಸಮಾರಂಭವಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ. ನಾನು ಮಠದ ಕಾರ್ಯಾಧ್ಯಕ್ನನಾಗಿ ನಾನು ಕೆಲಸ ಮಾಡುತ್ತಿದ್ದು, ಆ ಕಾರಣಕ್ಕೆ ಅಲ್ಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.