ದಿನದ ಸುದ್ದಿ

ಡಿಕೆಶಿಯಂಥ ಗಾಂ ಇನ್ನೊಬ್ಬ ಇಲ್ಲ : ರಮೇಶ್ ಜಾರಕಿಹೊಳಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು: ಮಹಾನಾಯಕ ಡಿಕೆಶಿಯಂಥ ಗಾಂ ಇನ್ನೊಬ್ಬ ಇಲ್ಲ. ನಾನು ಗಂಡಸು, ಡಿ.ಕೆ.ಶಿವಕುಮಾರ್ ವಿರುದ್ಧ ದೂರು ಕೊಡುತ್ತೇನೆ. ಅವನಿಗೆ ನಾನು ಯಾಕೆ ಹೆದರಬೇಕು? ಮುಂದಿನ ಚುನಾವಣೆಯಲ್ಲಿ ಕನಕಪುರದಲ್ಲಿ ನಾನು ಡಿ.ಕೆ.ಶಿವಕುಮಾರ್ ಸೋಲಿಸುತ್ತೇನೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಸೋಲಿಸಲು ಎಲ್ಲ ತಂತ್ರಗಳನ್ನು ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಇಂದೇ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ಕೊಡುತ್ತೇನೆ. ಡಿ.ಕೆ.ಶಿ ವಿರುದ್ಧ ಎಸ್‍ಐಟಿಗೆ ದೂರು ಕೊಡುತ್ತೇನೆ. ಈ ಕೇಸ್ ನಲ್ಲಿ ಯಾರೆಲ್ಲ ಇದ್ದಾರೆಂದು ತನಿಖೆಯಲ್ಲಿ ಗೊತ್ತಾಗುತ್ತದೆ. ಡಿಕೆಶಿ ವಿರುದ್ಧ ಇನ್ನೂ 11 ದಾಖಲೆಗಳು ನನ್ನ ಬಳಿ ಇವೆ, ಡಿಕೆಶಿ ರಾಜೀನಾಮೆ ನೀಡಲೇಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ | ದಾವಣಗೆರೆ | ಗ್ರಾ.ಪಂ ಹಾಗೂ ಮಹಾ ನಗರಪಾಲಿಕೆ ಚುನಾವಣೆ : ಮಾ.29ರಂದು ರಜೆ

ಮಹಾನಾಯಕ ಯಾರು ಎಂಬುದನ್ನ ಅವರೇ ಹೇಳಿದ್ದು, ಕಿಂಗ್‍ಪಿನ್ ನರೇಶ್ ಗೌಡ ಜೊತೆ ಸಂಪರ್ಕ ಇದೆ ಎಂದು ಒಪ್ಪಿಕೊಂಡಿದ್ದಾರೆ. ಈ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್, ಇಂಥ ಷಡ್ಯಂತ್ರ್ಯ ವನ್ನು ಆ ನಾಯಕ ಮಾಡಬಾರದಿತ್ತು. ಆ ನಾಯಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version