ರಾಜಕೀಯ
ಎಸ್. ಎಂ.ಕೃಷ್ಣ ಮನೆಯಲ್ಲಿ ಡಿಕೆಶಿ ಪುತ್ರಿ ಮದುವೆ ಮಾತುಕತೆ
ಸುದ್ದಿದಿನ, ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾರಿಗೂ ಕಾಫಿ ಡೇ ಸ್ಥಾಪಕ ದಿ. ಸಿದ್ದಾರ್ಥರ ಪುತ್ರ ಅಮರ್ಥ್ಯರಿಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಮಾಜಿ ಮುಖ್ಯಮಂತ್ರಿ, ರಾಜ್ಯದ ವರ್ಚಸ್ವೀ ನಾಯಕ ಎಸ್ ಎಂ ಕೃಷ್ಣರ ಮನೆಯಲ್ಲಿ ಮೊನ್ನೆ ಶುಕ್ರವಾರ ಮಾತುಕತೆ ಜರುಗಿದೆ.
ಸಿದ್ಧಾರ್ಥರ ಪತ್ನಿ ಹಾಗೂ ಎಸ್ ಎಂ ಕೃಷ್ಣರ ಮಗಳಾಗಿರುವ ಮಾಳವಿಕಾ ಮತ್ತು ಡಿ.ಕೆ ಶಿವಕುಮಾರ್ ಕುಟುಂಬದ ನಡುವೆ ನಡೆದ ಮಾತುಕತೆಯ ಫೋಟೋಗಳನ್ನು ಇಂದು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಈ ಅನೌಪಚಾರಿಕ ಕೂಟದಲ್ಲಿ ಮನೆಯ ಹಲವಾರು ಆಪ್ತರು ಸಹ ಭಾಗಿಯಾಗಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243