ದಿನದ ಸುದ್ದಿ

ಡಿಕೆಶಿ ಬಳಿ 317 ಖಾತೆ, 800 ಕೋಟಿ ಆಸ್ತಿ ಪತ್ತೆ – ಸೆ.17ರವರೆಗೆ ಇಡಿ ಕಸ್ಟಡಿಗೆ..!

Published

on

ಸುದ್ದಿದಿನ,ನವದೆಹಲಿ: ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಅವಧಿಯನ್ನು ವಿಶೇಷ ಕೋರ್ಟ್ 5 ದಿನ ವಿಸ್ತರಿಸಿದೆ.

ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ದೆಹಲಿಯ ರೋಸ್ ಅವೆನ್ಯೂ ವಿಶೇಷ ಕೋರ್ಟ್ಗೆ ಹಾಜರು ಪಡಿಸಿದ್ರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹರ್ ಡಿಕೆಶಿ ಅವರನ್ನ ಇನ್ನು ಐದು ದಿನ ಇಡಿ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರೆ, ವಿಚಾರಣೆ ಪೂರ್ಣಗೊಂಡಿಲ್ಲ 5 ದಿನ ಕಸ್ಟಡಿಗೆ ನೀಡಿ ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ವಾದಿಸಿದರು. ವಿಚಾರಣೆ ಸಂದರ್ಭದಲ್ಲಿ ಜಡ್ಜ್ ಸೋಮವಾರದ ಒಳಗಡೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಇಡಿಗೆ ಸೂಚಿಸಿದರು. ಎರಡು ಕಡೆ ವಾದ, ಪ್ರತಿವಾದ ಆಲಿಸಿದ ಕೋರ್ಟ್ ಡಿಕೆಶಿಯನ್ನು ಸೆ.17ರವರೆಗೆ ಇಡಿ ಕಸ್ಟಡಿಗೆ ನೀಡಿತು.

ಇ.ಡಿ ಪರ ವಕೀಲರ ವಾದವೇನು?

ಡಿಕೆ ಶಿವಕುಮಾರ್ ಗೆ ಸಂಬಂಧ ಪಟ್ಟ 317 ಬ್ಯಾಂಕ್ ಖಾತೆಗಳಿಂದ ವ್ಯವಹಾರ ನಡೆಸುತ್ತಿದ್ದು ಈ ಬಗ್ಗೆ ತನಿಖೆ ನಡೆಸಬೇಕಾಗಿದೆ. ಇ.ಡಿ. ಸಂಗ್ರಹಿಸಿರುವ ದಾಖಲೆಗಳಿಗೆ ಡಿಕೆ ಶಿವಕುಮಾರ್ ಉತ್ತರ ನೀಡಬೇಕಾಗಿದೆ. ಡಿಕೆಶಿ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವುದು ಇ.ಡಿ ಗಮನಕ್ಕೆ ಬಂದಿದೆ. ಅಲ್ಲದೇ ಡಿಕೆಶಿಗೆ ಮಾತ್ರವೇ ತಿಳಿದಿರುವ ಸಂಗತಿಯನ್ನು ಇ.ಡಿಗೆ ನೀಡುತ್ತಿಲ್ಲ. ಹೀಗಾಗಿ ಇನ್ನೂ ಐದು ದಿನಗಳ ಕಾಲ ವಿಚಾರಣೆ ನಡೆಸಲು ಡಿಕೆಶಿಯನ್ನು ಇ.ಡಿ. ಕಸ್ಟಡಿಗೆ ಒಪ್ಪಿಸಬೇಕೆಂದು ವಾದ ಮಂಡಿಸಿದ್ದರು.

ಮುಂದಿನ ಐದು ದಿನಗಳಲ್ಲಿ ಉತ್ತರ ನೀಡುತ್ತಾರೆಂಬ ಭಾವಿಸಿದ್ದೀರಾ? ಹಣದ ಎಲ್ಲಿಂದ ಬಂತು, ಎಲ್ಲಿಗೆ ಹೋಯ್ತು ನಂತರ ವಿಚಾರಿಸೋಣ. ಪಿಎಂಎಲ್ ಎ ಅನುಸೂಚಿತ ಅಪರಾಧಗಳನ್ನು ಮೀರಿ ಇ.ಡಿ ತನಿಖೆ ನಡೆಸಬಹುದೇ? ಈ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ನಂತರ ವಿಚಾರಣೆ ಆರಂಭವಾಗಬೇಕಿದೆ ಎಂದು ಜಡ್ಜ್ ಕುಹರ್ ಇ.ಡಿ ಪರ ವಕೀಲರನ್ನು ಪ್ರಶ್ನಿಸಿದ್ದರು.

ಡಿಕೆಶಿ ಪರ ಅಭಿಷೇಕ್ ಮನುಸಿಂಘ್ವಿ ವಾದ:

ಇಲ್ಲಿಯವರೆಗೂ ಇ.ಡಿ.ನೂರಾರು ಗಂಟೆಗಳ ಕಾಲಾವಕಾಶ ಸಿಕ್ಕಿದೆ. ಡಿಕೆಶಿ ಅನಾರೋಗ್ಯದ ಮಾಹಿತಿ ಕೋರ್ಟ್ ಗೆ ನೀಡಿದ ಸಿಂಘ್ವಿ. ಅವರ ಆರೋಗ್ಯ ಸ್ಥಿತಿಯನ್ನು ಇ.ಡಿ ಮುಚ್ಚಿಟ್ಟಿದೆ. ನಿನ್ನೆ ರಾತ್ರಿ ಡಿಕೆಶಿ ಆಸ್ಪತ್ರೆಗೆ ದಾಖಲಾಗಿದ್ದರು. ಅತೀವ ರಕ್ತದೊತ್ತಡ ಪಾರ್ಶ್ವವಾಯುಗೆ ಕಾರಣವಾಗುತ್ತದೆ. ಇಂಜೆಕ್ಷನ್ ನೀಡಿದ ಬಳಿಕವೂ ಡಿಕೆಶಿ ಬಿಪಿ 160/120ರಷ್ಟು ಇತ್ತು. ನಿನ್ನೆ ಬಿಪಿ 200/140ಕ್ಕೆ ಏರಿತ್ತು. ಕೋರ್ಟ್ ಏನಾದರೂ ಆದೇಶ ನೀಡಲಿ ಡಿಕೆಶಿ ಇವತ್ತು ಆಸ್ಪತ್ರೆಗೆ ದಾಖಲಾಗಬೇಕು ಎಂದು ಸಿಂಘ್ವಿ ಪ್ರತಿವಾದ ಮಂಡಿಸಿದ್ದರು.

ಡಿಕೆ ಶಿವಕುಮಾರ್ ತನಿಖೆಗೆ ಸಹಕರಿಸುತ್ತಿಲ್ಲ ಎಂದರೆ ಏನರ್ಥ. ಎಲ್ಲಾ ಕಡೆ ಸಿಕ್ಕ ಹಣ ಸೇರಿಸಿ 8.5 ಕೋಟಿ ಸಿಕ್ಕಿದೆ ಅಂತ ಹೇಳಿದ್ದಾರೆ. ಆದರೆ ಆರೋಪ ಬಂದಿರೋದು ಕೇವಲ 41 ಲಕ್ಷ ರೂಪಾಯಿ ಹಣದ್ದಾಗಿದೆ. ಆಂಜನೇಯ, ಸಚಿನ್ ನಾರಾಯಣ್ ಬೇರೆ, ಬೇರೆ ವ್ಯಕ್ತಿಗಳು. ಮೂವರು ಪ್ರತ್ಯೇಕವಾಗಿ ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ. ಮತ್ತೆ ಡಿಕೆಶಿಯನ್ನು ಇ.ಡಿ ವಶಕ್ಕೆ ಒಪ್ಪಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿಂಘ್ವಿ ವಾದಿಸಿದ್ರು.

Trending

Exit mobile version