ದಿನದ ಸುದ್ದಿ
ತುಂಗಭದ್ರಾ ನದಿಯ 30 ಟಿ.ಎಂ.ಸಿ. ನೀರಿನ ಸದ್ಬಳಕೆ ; ಆಂಧ್ರ ಹಾಗೂ ತೆಲಂಗಾಣ ಸಚಿವರ ಜೊತೆ ಡಿ.ಕೆ. ಶಿವಕುಮಾರ ಸಮಾಲೋಚನೆ
ಸುದ್ದಿದಿನಡೆಸ್ಕ್:ತುಂಗಭದ್ರಾ ನದಿಯ, 30 ಟಿ.ಎಂ.ಸಿ. ಅಡಿ ನೀರನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಲು, ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ, ರಾಜಸ್ಥಾನದ ಉದಯಪುರದಲ್ಲಿ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಜಲ ಸಂಪನ್ಮೂಲ ಖಾತೆ ಸಚಿವರ ಜೊತೆ ಚರ್ಚೆ ನಡೆಸಿದ್ದಾಗಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.
ಉದಯಪುರದಲ್ಲಿ ಆಯೋಜಿಸಿದ್ದ, ರಾಜ್ಯಗಳ ಜಲ ಸಂಪನ್ಮೂಲ ಖಾತೆ ಸಚಿವರ, ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದರು. ಕೇಂದ್ರ ಜಲಶಕ್ತಿ ಖಾತೆ ಸಚಿವರು, ಇದೇ 25 ರಂದು ಹೊಸ ದಿಲ್ಲಿಯಲ್ಲಿ ಭೇಟಿಗೆ ಕಾಲಾವಕಾಶ ನೀಡಿದ್ದಾರೆ. ಮಹಾದಾಯಿ, ಮೇಕೆದಾಟು, ಕೃಷ್ಣ ಮೇಲ್ದಂಡೆ ಹಾಗೂ ಭದ್ರಾ ನೀರಾವರಿ ಯೋಜನೆಗಳ ಬಗ್ಗೆ, ವಿಸ್ತೃತ ಚರ್ಚೆ ನಡೆಸುವುದಾಗಿ, ಸುದ್ದಿಗಾರರಿಗೆ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243