ರಾಜಕೀಯ

ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಭೂ ಸಂಕಟ !

Published

on

ಸುದ್ದಿದಿನ ಡೆಸ್ಕ್: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಭೂ ಹಗರಣಕ್ಕೆ ಸಂಧಿಸಿದಂತೆ ಸಂಕಟ ಶುರುವಾಗಿದೆ.

2008ರಲ್ಲಿ ನಡೆದ ಗುರ್ಗಾಂವ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ ಹಾಗೂ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ರಾಬರ್ಟ್ ವಾದ್ರಾ, ಭುಪಿಂದರ್ ಸಿಂಗ್ ಹೂಡಾ, ಸ್ಕೈಲೈಟ್ ಸಂಸ್ಥೆ, ಡಿಎಲ್‍ಎಫ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಕುರಿತು ಈ ಹಿಂದೆ ಕೂಡ ಹಲವು ಆರೋಪಗಳು ಕೇಳಿಬಂದಿದ್ದು, ಈಗ ಮತ್ತೆ ಪ್ರಕರಣ ದಾಖಲಾಗಿದ್ದು, ರಾಬರ್ಟ್ ವಾದ್ರಾ ಅವರಿಗೆ ಸಂಕಟ ಶುರುವಾಗಿದೆ.

Leave a Reply

Your email address will not be published. Required fields are marked *

Trending

Exit mobile version