ದಿನದ ಸುದ್ದಿ
ಸರಕಾರ ಬೀಳುವವರೆಗೆ ಯಾವುದೇ ಆಪರೇಷನ್ ಬೇಡ : ಬಿ ಎಸ್ ವೈ ಗೆ’ ಶಾ’ ಸೂಚನೆ
ಸುದ್ದಿದಿನ ಡೆಸ್ಕ್ : ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ವಿಚಾರದ ಹಿನ್ನೆಲೆ, “ಸಮಿಶ್ರ ಸರ್ಕಾರ ವಿಷಯ ಬಿಟ್ಟುಬಿಡಿ, ಏನೂ ಪ್ರಯತ್ನ ಮಾಡಬೇಡಿ.ಸರ್ಕಾರ ಬಿದ್ದು ಹೋಗೋತನಕ ಯಾವುದೆ ಆಪರೇಶನ್ ಇತ್ಯಾದಿಗಳು ಬೇಡ,ಲೋಕಸಭೆ ಚುನಾವಣೆ ಮೊದಲು ಮುಗಿಯಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೇಲಿ 25 ಸ್ಥಾನ ಗೆಲ್ಲಲು ಪ್ರಯತ್ನ ಇರಲಿ. ಎಂದು 2019ರ ನಂತರ ಈ ವಿಚಾರದಲ್ಲಿ ಮುಂದುವರೆಯೋಣ ಎಂದು ಯಡಿಯೂರಪ್ಪ ಗೆ ಅಹಮದಾಬಾದ್ ನಲ್ಲಿ ಅಮಿತ್ ಶಾ ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ಕೇಂದ್ರ ಬಿಜೆಪಿಯ ತಂಡ ಕೆಲಸ ಮಾಡ್ತಿದೆ, ಸರ್ಕಾರದ ಪ್ರತಿಯೊಂದು ಬೆಳವಣಿಗೆ ಬಗ್ಗೆ ನಮ್ಮ ತಂಡ ಗಮನಹರಿಸಿದೆ. ವರದಿ ಆಧಾರದ ಮೇಲೆ ಏನು ಕಾರ್ಯಾಚರಣೆ ಕೈಗೊಳ್ಳಬೇಕೆಂದು ನಾವೇ ನಿಮಗೆ ತಿಳಿಸುತ್ತೇವೆ.
ಚರ್ಚೆ ಬಳಿಕ ಅಮಿತ್ ಶಾ ಗೆ ಜೂನ್ 26 ರ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಹ್ವಾನ ನೀಡಿದ ಬಿಎಸ್ ವೈ. ಸಾಧ್ಯವಾದರೆ ಬೆಂಗಳೂರು ಕಾರ್ಯಕಾರಿಣಿ ಸಭೆಗೆ ಬರುವುದಾಗಿ ಅಮಿತ್ ಶಾ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401