ಲೈಫ್ ಸ್ಟೈಲ್
ಎಣ್ಣೆ ತ್ವಚೆಗೆ ಬೇಡ ಬೇಸಿಗೆಯ ಧಗೆ
ಬೇಸಗೆಯ ಧಗೆ ಏರುತ್ತಿದೆ. ಎಣ್ಣೆ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶುಷ್ಕ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶಷ್ಕ ತ್ವಚೆಯ ಮಹಿಳೆಯರಿಗೆ ಹೋಲಿಸಿದರೆ, ಎಣ್ಣೆ ತ್ವಚೆಯುಳ್ಳ ಮಹಿಳೆಯರ ಮುಖ ಸುಕ್ಕು ಗಟ್ಟುವುದು ಕಡಿಮೆ. ಇದು ಎಣ್ಣೆ ತ್ವಚೆಯವರಿಗೆ ಇರುವವರಿಗೆ ವರದಾನ.ಆದರೆ ಬೇಶಿಗೆಕಾಲದಲ್ಲಿ ಮಾತ್ರ ಮೇಕಪ್ ಮಾಡಿದರೆ ಅದು ಮುಖದ ಮೇಲೆ ಇರುವುದು ಕೆಲವೇ ಕ್ಷಣಗಳು ಮಾತ್ರ.
ಸಭೆ ಸಮಾರಂಭಗಳಿಗೆ ಹೋಗುವುದಕ್ಕೆ ಇವರು ಹೆಚ್ಚಿಗೆ ಮುಜುಗರ ಪಡುತ್ತಾರೆ. ತಾವು ಆಕರ್ಷಕವಾಗಿ ಕಾಣುವುದಿಲ್ಲ ಎಂಬ ಕೊರಗು ಅವರದ್ದು ಹಾಗಿದ್ದರೆ ಎಣ್ಣೆ ತ್ವಚೆಯವರು ಆಕರ್ಷಕವಾಗಿ ಕಾಣಲು ಈ ಸಲಹೆಗಳನ್ನು ಪಾಲಿಸ ಬಹುದು.
ಸಲಹೆಗಳು
- ಎಣ್ಣೆ ತ್ವಚೆಯುಳ್ಳವರು ಮುಖವನ್ನು ಎಷ್ಟೇ ಬಾರಿ ತೊಳೆದಿದ್ದರೂ ಮೇಕಪ್ ಮಾಡುವ ಸ್ವಲ್ಪ ಮೊದಲು ಇನ್ನೊಮ್ಮೆ ಮುಖ ತೊಳೆದು ಕೊಳ್ಳುವುದು ಉತ್ತಮ. ಮುಖ ತೊಳೆಯುವ ಸಂದರ್ಭದಲ್ಲಿ ಸ್ಕ್ರಬ್ಬರ್ ಬಳಸಿದರೆ ಹೆಚ್ಚು ಪರಿಣಾಮಕಾರಿ. ಇದು ಮುಖದಲ್ಲಿನ ಎಣ್ಣೆ ಅಂಶ ಹೀರಿಕೊಳ್ಳುತ್ತದೆ.
- ಮುಖದಲ್ಲಿ ಎಣ್ಣೆ ಅಂಶ ಇದೆ ಎಂದು ಪದೇ ಪದೇ ಮುಖ ತೊಳೆಯುತ್ತಾ ಇರಬೇಡಿ. 3-4 ಬಾರಿ ಮುಖ ತೊಳೆಯಬಹುದು. ಇದರಿಂದ ತ್ವಚೆಯ ಆರೋಗ್ಯ ಚೆನ್ನಾಗಿ ಇರುತ್ತದೆ. ಆದರೆ ಇದಕ್ಕಿಂತ ಹೆಚ್ಚಿನ ಬಾರಿ ಮುಖ ತೊಳೆಯುತ್ತಿದ್ದರೆ ಅದು ತ್ವಚೆಯಲ್ಲಿನ ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜಿಡ್ಡಿನಂಶದಿಂದ ತ್ವಚೆಯನ್ನು ರಕ್ಷಿಸಲು ಬ್ಲೋಟಿಂಗ್ ಪೇಪರ್ ಕೂಡ ಬಳಸ ಬಹುದು.
- ಮುಖ ಒರೆಸಿಕೊಂಡ ನಂತರ ಸಂಪೂರ್ಣ ಮುಖದ ಮೇಲೆ ಐಸ್ನಿಂದ ಕೈಯಾಡಿಸಿ. ಅದನ್ನು ಹಾಗೆಯೇ ಒಣಗಲು ಬಿಡಿ. ನಂತರ ಮೇಕಪ್ ಮಾಡಿ. ಇದರಿಂದ ಮುಖದಲ್ಲಿರುವ ಎಣ್ಣೆ ಅಂಶ ಕಾಣವುದಿಲ್ಲ. ಜೊತೆಗೆ ಮೇಕಪ್ ಕೂಡ ತುಂಬಾ ಸಮಯ ಉಳಿಯುತ್ತದೆ.
- ಮುಖದಲ್ಲಿ ಧೂಳು ಇದ್ದರೆ ಉಳಿದ ತ್ವಚೆಯವರಿಗಿಂತ ಎಣ್ಣೆ ತ್ವಚೆ ಇರುವವರಲ್ಲಿ ರಂದ್ರಗಳು ಅಧಿಕ ಪ್ರಮಾಣದಲ್ಲಿ ಉಂಟಾಗುತ್ತದೆ.ಇದರಿಂದ ದಿನವೂ ಕ್ಲೆನ್ಸಿಂಗ್ ಮಾಡುವುದು ಉತ್ತಮ, ಇದರಿಂಧ ರಂದ್ರಗಳು ಚಿಕ್ಕದಾಗುತ್ತವೆ.ಅದೇ ರೀತಿ ದಿನವೂ ಒಂದು ನಿಮಿಷ ಐಸ್‍ಕ್ಯೂಬ್‍ನಿಂದ ಮಸಾಜ್ ಮಾಡಿದರೆ ಮುಖದ ತ್ವಚೆ ಬಿಗಿದುಕೊಂಡು ರಂಧ್ರಗಳು ಮುಚ್ಚಿಕೊಳ್ಳುತ್ತವೆ.
- ಅಡುಗೆ ಸೋಡಾವನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ರಂಧ್ರಗಳು ಕಮ್ಮಿಯಾಗುತ್ತವೆ. ಅಡುಗೆ ಸೋಡಾವನ್ನು ಬಿಸಿನೀರು ಹಾಕಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿ 30 ಸೆಕೆಂಡ್ ಇಟ್ಟು ಮುಖ ತೊಳೆಯಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಮಾಡಿ, ಈ ರೀತಿ ಮಾಡುವುದರಿಂದಲು ಮುಖದ ರಂಧ್ರಗಳು ಎದ್ದು ಕಾಣದಂದೆ ತ್ವಚೆ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಆದರೆ ಸೂಕ್ಷ್ಮ ತ್ವಚೆ ಆಗಿದ್ದರೆ ಇದನ್ನು ಮಾಡಲು ಹೋಗಬೇಡಿ.