ಬಹಿರಂಗ
ಸಂವಿಧಾನ ಉಳಿಸಿಕೊಳ್ಳಲು ಯುದ್ಧ ಮಾಡಬೇಕೇ..!?
ಹಿಂದೆ ರಾಜನೊಬ್ಬನನ್ನು ಬದಲಾಯಿಸಲು “ಯುದ್ಧ” ಮಾಡಬೇಕಿತ್ತು.ರಕ್ತದ ಕೋಡಿ ಹರಿಯುತ್ತಿತ್ತು.. ಆದರೆ ಈಗ ಬಾಬಾಸಾಹೇಬರ ಸಂವಿಧಾನವು ರಕ್ತರಹಿತವಾಗಿ ಚುನಾವಣೆ ಎಂಬ ಮೌನಯುದ್ಧ ಓಟು ಎಂಬ ರಕ್ತ ಚೆಲ್ಲದ ಎರಡಲಗಿನ ಕತ್ತಿಯಿಂದ ವ್ಯವಸ್ಥೆಯನ್ನು ರಾಜನನ್ನು ಸುಲಭವಾಗಿ ಶಾಂತವಾಗಿ ಬದಲಿಸಬಹುದಾದ ಅವಕಾಶ ನೀಡಿದೆ..!
ಆಗ ಬಾಬಾಸಾಹೇಬರ ಸಂವಿಧಾನವಿರಲಿಲ್ಲ ಚುನಾವಣೆ ಇರಲಿಲ್ಲ ಓಟು ಹಾಕುವ ಅಧಿಕಾರವೂ ಇರಲಿಲ್ಲ ಹಾಗಾಗಿ ನಮ್ಮ ಪೂರ್ವಿಕ ಸ್ವಾಭಿಮಾನಿ ಧೀರಕಲಿಗಳು ವ್ಯವಸ್ಥೆಯೊಂದರ ಬದಲಾವಣೆಗಾಗಿ ಕೋರೆಗಾಂವ್ ಯುದ್ಧಭೂಮಿಯ ರಣರಂಗದಲ್ಲಿ ಕತ್ತಿ ಹಿಡಿದು ನಿಂತು ಹೋರಾಡಿ ತಮ್ಮ ಧೀರತನವನ್ನು ಸ್ವಾಭಿಮಾನವನ್ನು ಸಾಬೀತುಪಡಿಸಿದರು
ಆದರೆ ಈಗ, ವ್ಯವಸ್ಥೆಯೊಂದನ್ನು ಬದಲಾಯಿಸಲು ನಮ್ಮ ಧೀರತನವನ್ನು ತಾಕತ್ತನ್ನು ಮತ್ತು ಸ್ವಾಭಿಮಾನವನ್ನು ಸಾಬೀತುಪಡಿಸಲು ತಾಯ್ನೆಲವನ್ನು ಕಾಪಾಡಿಕೊಳ್ಳಲು ಅರ್ಥಾತ್ ಅಪ್ಪನ ಸಂವಿಧಾನವನ್ನು ಉಳಿಸಿಕೊಳ್ಳಲು ಕತ್ತಿ ಹಿಡಿಯಬೇಕಿಲ್ಲ ರಕ್ತ ಚೆಲ್ಲಬೇಕಿಲ್ಲ ಪ್ರಾಣ ತೆಗೆಯಬೇಕಿಲ್ಲ ಪ್ರಾಣತ್ಯಾಗ ಮಾಡಲೂಬೇಕಿಲ್ಲ…
ಈಗ ಯುದ್ಧವೆಂದರೆ ಚುನಾವಣೆ. ಅದುವೇ ಮೌನಕ್ರಾಂತಿ ಅದುವೇ ಮೌನಮಹಾಯುದ್ಧ..!! ಸೈಲೆಂಟಾಗಿ ಸಾಲಲ್ಲಿ ನಿಂತು ಬೆರಳ ತುದಿಗೆ ಬಾಬಾಸಾಹೇಬರು ಅಂಟಿಸಿದ ಓಟು ಎಂಬ ಭೀಮಾಸ್ತ್ರದಿಂದ ಮೌನವಾಗಿ ಯುದ್ಧಗೆಲ್ಲಬಹುದು. ಸಂವಿಧಾನವನ್ನು ನಿಷ್ಕ್ರಿಯೆಗೊಳಿಸಿದ ಭಂಡರನ್ನು ಮತ್ತು ಸಂವಿಧಾನವನ್ನು ಮುಗಿಸಲೇ ಹೊರಟಿರುವ ಕ್ರೂರಿಗಳನ್ನು ಹಾಗು ಸಂವಿಧಾನದ ಅರಿವೇ ಇರದ ಮೂರ್ಖರನ್ನು ಬೆರಳತುದಿಯಲ್ಲಿಯೇ ಎಳೆದು ಆಚೆ ಬಿಸಾಡಬಹುದು..!!
ಸುಮ್ಮನೆ ಸೋಲಿಸಿಬಿಡಿ. ನಮ್ಮ ಮುಂದೆ ದೈತ್ಯರಂತೆ ದೊಡ್ಡ ದೊಡ್ಡ ಸ್ಟಾರ್ ಗಳಂತೆ ಬಲಿಷ್ಟರಂತೆ ಕಾಣುವ ಈ ನಾಯಿನರಿಗಳು ಬಾಬಾಸಾಹೇಬರು ಹೇಳಿದಂತೆ ಓಟಿನ ಮಹತ್ವವನ್ನು ಅರ್ಥಮಾಡಿಕೊಂಡ ನಮ್ಮ ಬಹುಜನ ಜಾಗೃತ ಸಮುದಾಯ ಎಚ್ಚತ್ತುಕೊಂಡ ದಿನ ಆ ದೊಡ್ಡದೊಡ್ಡ ಮನುಷ್ಯರೆಲ್ಲರೂ ನಮ್ಮ ಷೂ ಲೇಸನ್ನು ಕಟ್ಟುವ ಕುಬ್ಜರಂತಾಗುತ್ತಾರೆ..!! ಅಷ್ಟೆ.
ಚುನಾವಣೆ ಎಂಬ ರಕ್ತರಹಿತ ಮೌನಯುದ್ಧ ನೀತಿಯ ಪ್ರಕಾರ ನಮ್ಮ “ಓಟು” ಎಂಬ ಅಸ್ತ್ರಗಳ ಮುಂದೆ ಸಂವಿಧಾನ ವಿರೋಧಿ ಶತ್ರುಪಾಳಯದವರೂ ಸಾಂವಿಧಾನಿಕವಾಗಿ “ಓಟು” ಎಂಬ ಅಸ್ತ್ರಗಳನ್ನೇ ಹಿಡಿದು ನ್ಯಾಯಯುತವಾಗಿ ಯುದ್ಧ ಮಾಡಿದ್ದರೆ ದಿಲ್ಲಿಗದ್ದುಗೆ ಎಂದೋ ಮಾನವತಾವಾದಿ ಮೂಲನಿವಾಸಿ ಬಹುಜನರದಾಗುತ್ತಿತ್ತು ಆದರೆ ಈ ಕ್ರೂರಿಗಳು ಆರಂಭದಿಂದಲೂ ನಮ್ಮ “ಓಟು” ಎಂಬ ಅಸ್ತ್ರದ ಮುಂದೆ ಹಿಡಿದು ನಿಂತು ಯುದ್ಧ ಮಾಡುತ್ತಿರುವುದು “ಹಣ ಹೆಂಡ ಜಾತಿ” ಎಂಬ ಅಸಾಂವಿಧಾನಿಕ ಅಸ್ತ್ರಗಳನ್ನು..!!
ಈಗ ಈ ರಣಹೇಡಿಗಳು EVM ಮೆಷಿನ್ ಗಳೆಂಬ ಎಂಬ ದುಷ್ಟದೇವತೆಗಳನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ನಿಂತಿದ್ದಾರೆ ಎಂಬುದೊಂದೇ ಕೊರಗು ಆತಂಕ..!! ಫಲಿತಾಂಶ ಬರಲಿ.. ಕಾಯೋಣ… ಮಾರ್ಗ ಹುಡುಕೋಣ..! ನಮ್ಮೆದೆಯೊಳಗೆ ಬುದ್ಧ-ಬಸವ-ಬಾಬಾಸಾಹೇಬರೊಂದಿಗೆ ಸಿದ್ದನಾಕ ಟಿಪ್ಪುವೂ ಇದ್ದಾರೆ…! ಜೈಭೀಮ್.
–ಹ.ರಾ.ಮಹಿಶ
ಸುದ್ದಿದಿನ.ಕಾಂ|ವಾಟ್ಸಾಪ್|9980346243