ಸಿನಿ ಸುದ್ದಿ
‘#Me too’ ಕ್ಯಾಂಪೇನ್ ಬಗ್ಗೆ ನಟಿ ಸಿಂಧು ಲೋಕನಾಥ್ ಏನ್ ಹೇಳಿದ್ರು ಗೊತ್ತಾ..?
ಸುದ್ದಿದಿನ, ಬೆಂಗಳೂರು : #Me too ಕ್ಯಾಪೇನ್ ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸಿಮೀತವಲ್ಲ ಸಾಮಾನ್ಯ ಜನರ ಲೈಫ್ ನಲ್ಲಿ ದಿನ ನಿತ್ಯ ನಡೆಯುತ್ತದೆ. ದಿನನಿತ್ಯ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣಮಕ್ಕಳ ಮೇಲೆ ದೌರ್ಜನ್ಯ, ಶೋಷಣೆಗೆ ಒಳಗಾಗಿದ್ದಾರೆ ಎಂದು #Me too ಕ್ಯಾಪೇನ್ ಬಗ್ಗೆ ಸಿಂಧುಲೋಕನಾಥ್ ಹೇಳಿದರು.
ಸಿನಿಮಾ ಅನ್ನೋ ಕಾರಣಕ್ಕೆ ಹೆಚ್ಚು ಬೇಗ ಸಾರ್ವಜನಿಕರಿಗೆ ತಲುಪಿ ಹೆಸರು ಆಗುತ್ತದೆ.
ಯಾವುದೇ ಹೆಣ್ಣಿಗೆ ಈ ರೀತಿ ಆದ ತಕ್ಷಣ ಅದನ್ನ ಸಂಬಂಧಪಟ್ಟವರ ಗಮನಕ್ಕೆ ತರಬೇಕು.
ಅದನ್ನ ಮುಚ್ಚಿ ಇಟ್ಟು ಆವಾಗಲ್ಲೋ ಆಗಿರೋದನ್ನ ಇವಾಗ ಹೇಳೋದು ಸರಿಯಲ್ಲ ಎಂದರು.
ಹೇಳಕ್ಕೂ ಧೈರ್ಯ ಬೇಕು ,ಹೇಳಿದ ನಂತರ ಆಕೆಯನ್ನ ಸಮಾಜ ಯಾವ ರೀತಿ ನೋಡುತ್ತೇ ಅದನ್ನ ಗಮನಿಸಬೇಕು. ನನ್ನ ಪ್ರಕಾರ ಆ ರೀತಿ ಘಟನೆ ನಡೆದ ತಕ್ಷಣ ಎಚ್ಚೆತ್ತು ಸಂಬಂಧಪಟ್ಟವರ ಗಮನಕ್ಕ ತರಬೇಕು ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401