ದಿನದ ಸುದ್ದಿ

ಸೆಪ್ಟೆಂಬರ್ ತಿಂಗಳ ಭಾರತದ ಒಟ್ಟಾರೆ ರಫ್ತು ಅಂದಾಜು ಎಷ್ಟು ಗೊತ್ತಾ..!?

Published

on

ಸುದ್ದಿದಿನ ಡೆಸ್ಕ್ : ಈ ಸಾಲಿನ ಸೆಪ್ಟೆಂಬರ್ ( September) ತಿಂಗಳಿನಲ್ಲಿ ಭಾರತದ ಒಟ್ಟಾರೆ ರಫ್ತು ( Export ) 61.10 ಶತಕೋಟಿ ಅಮೆರಿಕನ್ ಡಾಲರ್ ( American Dollars) ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 10.24ರಷ್ಟು ಬೆಳವಣಿಗೆಯಾಗಿದೆ. 2022ನೇ ವರ್ಷದ ಸೆಪ್ಟೆಂಬರ್‌ನಲ್ಲಿ ಒಟ್ಟಾರೆ ಆಮದುಗಳು 76.26ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗಿಂತ ಶೇಕಡಾ10.73ರಷ್ಟು ಧನಾತ್ಮಕ ಬೆಳವಣಿಗೆಯನ್ನು ಇದು ತೋರಿಸುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಈ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಸರಕು ಮತ್ತು ಸೇವೆಗಳನ್ನು ಒಟ್ಟುಗೂಡಿಸಿ ದೇಶದ ಒಟ್ಟಾರೆ ರಫ್ತು 382.31ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಸುಮಾರು ಶೇಕಡಾ 21ರಷ್ಟು ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version