ದಿನದ ಸುದ್ದಿ

ಈ ವರೆಗೆ ಸಂಗ್ರಹವಾಗಿರೋ ತೆರಿಗೆ ಹಣ ಎಷ್ಟು ಗೊತ್ತಾ..!?

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಸ್ಥಿರವಾದ ಬೆಳವಣಿಗೆ ದಾಖಲಾಗಿದೆ.

ಈ ತಿಂಗಳ 10ರವರೆಗೆ 15.67 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾದ ಒಟ್ಟು ತೆರಿಗೆ ಸಂಗ್ರಹಕ್ಕಿಂತ ಶೇಕಡ 24.09ರಷ್ಟು ಹೆಚ್ಚಾಗಿದೆ ಎಂದು ಸರ್ಕಾರದ ಇತ್ತೀಚಿನ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ನೇರ ತೆರಿಗೆಯಲ್ಲಿ ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆಗಳು ಬರುತ್ತವೆ.

ಮರುಪಾವತಿಯ ನಂತರ ನಿವ್ವಳ ತೆರಿಗೆ ಸಂಗ್ರಹವು 12.98ಲಕ್ಷ ಕೋಟಿ ರೂಪಾಯಿ ಆಗಿದ್ದು, ಇದು ಕಳೆದ ವರ್ಷದ ಇದೇ ಅವಧಿಯ ನಿವ್ವಳ ಸಂಗ್ರಹಕ್ಕಿಂತ ಶೇಕಡ 18.40ಯಷ್ಟು ಹೆಚ್ಚಾಗಿದೆ. ಪ್ರಸಕ್ತ ಆರ್ಥಿಕ ಸಾಲಿಗೆ ಒಂದೂವರೆ ತಿಂಗಳಿಗಿಂತ ಹೆಚ್ಚಿನ ಸಮಯ ಇದ್ದು, ಇನ್ನೂ ಹೆಚ್ಚಿನ ತೆರಿಗೆ ಸಂಗ್ರಹವನ್ನು ನಿರೀಕ್ಷಿಸಲಾಗಿದೆ.

ಕಾರ್ಪೊರೇಟ್ ಆದಾಯ ತೆರಿಗೆ ಸಂಗ್ರಹದಲ್ಲಿ ಶೇಕಡ 19.33ರಷ್ಟು, ವೈಯಕ್ತಿಕ ಆದಾಯ ತೆರಿಗೆಯಲ್ಲಿ ಶೇಕಡ 29.63ರಷ್ಟು ಏರಿಕೆ ದಾಖಲಾಗಿದೆ. ಇದೇ ವೇಳೆ ಸರಕಾರವು, ಕಳೆದ ಏಪ್ರಿಲ್ 1ರಿಂದ ಫೆಬ್ರವರಿ 10ರವರೆಗೆ2.69 ಲಕ್ಷ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆಯಿಂದ 18.23 ಲಕ್ಷ ಕೋಟಿ ರೂಪಾಯಿ ಸಂಗ್ರಹವನ್ನು ಸರಕಾರ ಅಂದಾಜಿಸಿದ್ದು, ಶೇಕಡ10.5ರ ಬೆಳವಣಿಗೆಯ ಗುರಿ ಹಾಕಿಕೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version