ದಿನದ ಸುದ್ದಿ
ಇಲ್ಲಿ ಸಿದ್ಧವಾಗೋ ರಾಷ್ಟ್ರಧ್ವಜ ದೆಲ್ಲೀಲಿ ಹಾರಾಡುತ್ತೆ; ಯಾವ ಊರದು, ನೋಡಿ ಇಲ್ಲಿದೆ ಮಾಹಿತಿ..!
ಸುದ್ದಿದಿನ ಡೆಸ್ಕ್
ದೇಶದ ಸಂಸತ್ತು ಭವನ, ರಾಷ್ಟ್ರಪತಿ ಭವನ, ಕೆಂಪುಕೋಟೆ ಸೇರಿ ಪ್ರಮುಖ ಸ್ಥಳಗಳಲ್ಲಿ ಹೆಮ್ಮೆಯಿಂದ ಹಾರಾಡುವ ರಾಷ್ಟ್ರಧ್ವಜ ಸಿದ್ಧ ಆಗೋದು ಎಲ್ಲಿ ಎಂಬುದು ಬಹುತೇಕರಿಗೆ ಮಾಹಿತಿ ಇರೋದಿಲ್ಲ. ಎಲ್ಲಿ ನಿರ್ಮಾಣ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.
ಉತ್ತರ ಕರ್ನಾಟಕದ ಹೆಬ್ಬಾಗಿಲು, ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ತಯಾರಾಗುತ್ತದೆ. ದೇಶದ ಬಹುತೇಕ ಕಡೆ ರಾಷ್ಟ್ರಧ್ವಜ ಸಿದ್ಧವಾಗುತ್ತದೆ. ಆದರೆ, ಹುಬ್ಬಳ್ಳಿಯಲ್ಲಿ ತಯಾರಾಗುವ ಧ್ವಜ ಗುಣಮಟ್ಟದಾಗಿದ್ದು, ಬಿಐಎಸ್ (ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಮಾನ್ಯತೆ ಪಡೆದ ಏಕೈಕ ಸಂಸ್ಥೆ ಇದಾಗಿದೆ. ದೇಶದ ಪ್ರಮುಖ ಸ್ಥಳಗಳಲ್ಲಿ ಹೆಮ್ಮೆಯಿಂದ ಹಾರಾಡುವ ರಾಷ್ಟ್ರಧ್ವಜ ತಯಾರಕ ಭೂಮಿ ಎಂಬುದು ಗರ್ವ ನಮ್ಮದು.
ಹುಬ್ಬಳ್ಳಿಯ ಧ್ವಜ ತಯಾರಿಕೆ ಘಟಕದಲ್ಲಿ 9 ವಿವಿಧ ಅಳತೆಯ ರಾಷ್ಟ್ರಧ್ವಜಗಳು ಸಿದ್ಧವಾಗುತ್ತವೆ. 170 ರೂಪಾರಿಯಿಂದ 17,800 ರೂ. ಮೌಲ್ಯದ ಧ್ವಜಗಳು ಮಾರಾಟಕ್ಕೆ ತಯಾರಾಗುತ್ತವೆ. ಈ ಧ್ವಜ ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳು ಬಾಗಲಕೋಟೆಯಿಂದ ತರಿಸಿಕೊಳ್ಳಲಾಗುತ್ತದೆ. ಧ್ವಜದ ಬಣ್ಣ,ಅಶೋಕ ಚಕ್ರದ ಮುದ್ರಣ, ಕಟಿಂಗ್ ಟೇಲರಿಂಗ್ ಸೇರಿದಂತೆ ಧ್ವಜವನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗುತ್ತದೆ. ನೂರಾರು ಜನರು ಈ ಕಾರ್ಯದಲ್ಲಿ ತೊಡಗಿದ್ದು, 30 ಜನ ನುರಿತ ಟೇಲರ್ ಗಳಿದ್ದಾರೆ.