ರಾಜಕೀಯ

ಕರುಣಾನಿಧಿ ಕಪ್ಪು ಕನ್ನಡಕ ಹಾಕೋದು ಯಾಕೆ ಗೊತ್ತಾ?

Published

on

ಸುದ್ದಿದಿನ ಡೆಸ್ಕ್:
ನಿನ್ನೆಯಷ್ಟೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದ್ರಾವಿಡ ಚಳವಳಿಯ ನೇತಾರ ಕರುಣಾನಿಧಿ ಅವರು ಕಪ್ಪು ಕನ್ನಡಕ ಯಾಕೆ ಹಾಕುತ್ತಿದ್ದರು ಎಂಬುದು ಕುತೂಹಲಕಾರಿ ವಿಷಯ.

ಕಪ್ಪು ಕನ್ನಡಕ, ಹಳದಿ ಟವಲ್ ಕರುಣಾ ಅವರ ಗುರುತುಗಳು. ಅವರು ಕಪ್ಪು ಬಣ್ಣದ ಕನ್ನಡಕ ಹಾಕುತ್ತಿದ್ದರ ಹಿಂದೆ ಒಂದು ಕಥೆಯೇ ಇದೆ.

ಕರುಣಾನಿಧಿ ಅವರು ಒಂದು ಅಪಘಾತಕ್ಕೆ ಒಳಗಾಗಿದ್ದರು ಈ ವೇಳೆ ಅವರ ಎಡಗಣ್ಣಿಗೆ ಬಲವಾಗಿ ಪೆಟ್ಟುಬಿದ್ದಿತ್ತು. ಈ ಗಾಯವನ್ನು ಮರೆಮಾಚುವ ಸಲುವಾಗಿ ಕಪ್ಪು ಕನ್ನಡಕ ಹಾಕುತ್ತಿದ್ದರು ಎನ್ನಲಾಗಿದೆ.
ಇನ್ನು ಕೆಲ ಮಾಹಿತಿಗಳ ಪ್ರಕಾರ ಕರುಣಾನಿಧಿ ಅವರು ತುರ್ತು ಪರಿಸ್ಥಿತಿ ಸಮಯದಲ್ಲಿ ಪೊಲೀಸನೊಬ್ಬ ಬೀಸಿದ ಲಾಠಿ ಕಣ್ಣಿಗೆ ತಾಗಿ ಗಾಯವಾಗಿತ್ತು ವಿದೇಶದಲ್ಲಿ ಆಪರೇಷನ್ ಆದ ನಂತರ ಕಪ್ಪು ಕನ್ನಡಕ ಧರಿಸಲು ವೈದ್ಯರು ಸಲಹೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಇದಕ್ಕೆ ನಿಖರ ಕಾರಣಗಳನ್ನು ಕುಟುಂಬದ ಮೂಲಗಳು ಬಿಟ್ಟುಕೊಟ್ಟಿಲ್ಲ.

ಕರುಣಾ ಅವರು ಕನ್ನಡಕ ಹಾಕುವ ಬಗ್ಗೆ ವ್ಯಂಗ್ಯಗಳೂ ಇವೆ.
ಕಣ್ಣುಗಳು ಸುಳ್ಳು ಹೇಳುತ್ತವೆ. ರಾಜಕಾರಣಿಯಾದ ಕರುಣಾ ಅವರು ತಾವು ಸುಳ್ಳು ಹೇಳುವುದು ಯಾರಿಗೂ ಗೊತ್ತಾಗಬಾರದೆಂದು ಕಪ್ಪು ಕನ್ನಡಕ ಧರಿಸುತ್ತಿದ್ದರು ಎಂದು ಕಟುವಾಗಿ ಟೀಕಿಸಲಾಗುತ್ತಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version