ದಿನದ ಸುದ್ದಿ

ವೈದ್ಯರ ಸಂಪರ್ಕಕ್ಕೆ ಇ-ಸಂಜೀವಿನಿ ಆಪ್

Published

on

ಸುದ್ದಿದಿನ,ಗದಗ: ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಮತ್ತಿತರ ರೋಗ ಲಕ್ಷಣಗಳಿದ್ದು, ಆಸ್ಪತ್ರೆಗೆ ತೆರಳಲು ಸಾಧ್ಯವಾಗದಿದ್ದರೆ ಇ-ಸಂಜೀವಿನಿ ಓಪಿಡಿ ಆರೋಗ್ಯ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು.

ಅಂತರ್ಜಾಲ ಸೌಲಭ್ಯವುಳ್ಳ ಸ್ಮಾರ್ಟ್ ಮೊಬೈಲ್ ಫೋನ್‌ನಲ್ಲಿ ಗೂಗಲ್ ಪ್ಲೇ-ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಗೂಗಲ್‌ನಲ್ಲಿ ಇ-ಸಂಜೀವಿನಿ ಓಪಿಡಿ ಎಂದು ಟೈಪ್ ಮಾಡಿದರೆ ತೆಗೆದುಕೊಳ್ಳುವ ಪುಟದಲ್ಲಿ ನೊಂದಾಯಿಸಬೇಕು.

ವೆಬ್ ವಿಡಿಯೋ ಮೂಲಕ ವೈದ್ಯರು ಸಂಪರ್ಕಕ್ಕೆ ಬರಲಿದ್ದು, ಅವರಿಂದ ಚಿಕಿತ್ಸೆ ಪಡೆಯಬಹುದು. ಈ ಸೇವೆಯೂ ಬೆಳಗ್ಗೆ10 ರಿಂದ ಸಾಯಂಕಾಲ 05 ಗಂಟೆಯವರೆಗೆ ಸೇವೆ ಲಭ್ಯವಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರಿಗಿಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version