ದಿನದ ಸುದ್ದಿ

ವೈದ್ಯರ ಪ್ರತಿಭಟನೆ : ಅಂಬುಲೆನ್ಸ್ ನಲ್ಲೇ ಗರ್ಭಿಣಿಯ ಹೆರಿಗೆ

Published

on

ಸುದ್ದಿದಿನ, ದಾವಣಗೆರೆ: ವಿದ್ಯಾರ್ಥಿ ವೇತನ ವಿತರಿಸುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾಸ್ಪತ್ರೆಯ ಕಿರಿಯ ವೈದ್ಯರು ಪ್ರತಿಭಟನೆಯ ಬಿಸಿ ರೋಗಿಗಳಿಗೆ ತಟ್ಟಿದ್ದು, ಆಸ್ಪತ್ರೆಯಲ್ಲಿ ದಾಖಲಾತಿ ವಿಳಂ ಮಾಡಿದ್ದರಿಂದ ಗರ್ಭಿಣಿಯೊಬ್ಬಳು ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಕಠಿಣ ಸಂದರ್ಭದಲ್ಲೂ ವೈದ್ಯರ ಹಠ ಜೀವವೊಂದನ್ನು ತೆಗೆದುಬಿಡುತ್ತಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಹಾನಿ ಉಂಟಾಗಿಲ್ಲ.

ಹರಪನಹಳ್ಳಿ ತಾಲೂಕಿನ ಹಿತ್ತಿಮಗೇರಿ ಗ್ರಾಮದ ಅಂಬಿಕಾ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಕುಟುಂಬದವರು ಹತ್ತಿರದ ಅರಸೀಕೆರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿನ ವೈದ್ಯರು ನೆಪವೊಡ್ಡಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ತುಂಬು ಗರ್ಭಿಣಿ ಮತ್ತು ಆಕೆಯ ಕುಟುಂಬದವರಿಗೆ ಶಾಕ್ ಕಾದಿತ್ತು. ಅಲ್ಲಿವೂ ದಾಖಲಾತಿ ನೀಡದೇ ಕೈಚೆಲ್ಲಿದ್ದರು.

ಕೊನೆಗೆ ಅನೇಕ ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ ಆದರೆ, ಎಲ್ಲೂ ದಾಖಲಾತಿ ಮಾಡಿಕೊಳ್ಳದೇ ವಾಪಸ್ ಕಳುಹಿಸುತ್ತಾರೆ. ಇದರ ಪರಿಣಾಮ ಆ ಗರ್ಭಿಣಿ ಪ್ರಸವ ವೇದನೆ ತಾಳಲಾರದೇ ತಾನು ಬಂದಿದ್ದ ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ, ಮಗು ಆರೋಗ್ಯವಾಗಿ ಇದ್ದಾರೆ.

ವೈದ್ಯರ ಪ್ರತಿಭಟನೆ ಏನಿದ್ದರೂ ಸರ್ಕಾರದ ವಿರುದ್ಧ ಮಾಡಬೇಕು. ದೇಚರೆಂದು ರೋಗಿಗಳ ಮೇಲೆ ತೋರಿಸುವುದು ಸರಿಯಲ್ಲ. ಆಡಳಿತ ಯಂತ್ರವೂ ಅಷ್ಟೇ ಸರ್ಕಾರಿ ಸೇವೆಯಲ್ಲಿ ಇರುವ ವೈದ್ಯರಿಗೆ ಸಕಾಲದಲ್ಲಿ ಸೌಲಭ್ಯ ನೀಡಬೇಕು, ಅವರ ಕುಂದುಕೊರತೆ ಆಲಿಸಬೇಕು. ಇದನ್ನು ಬಿಟ್ಟು ಸಾರ್ವಜನಿಕ ಸೇವೆ ಮಾಡುತ್ತಿರುವವರ ಅಲಕ್ಷ್ಯ ಸರಿಯಲ್ಲ. ಇಂತಹ ಪ್ರಕರಣ ಮತ್ತೊಮ್ಮೆ ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರ ನೀಡಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version