ದಿನದ ಸುದ್ದಿ
ದೊಡ್ಡಘಟ್ಟ | ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ವಸತಿಯುತ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಸುದ್ದಿದಿನ,ಚನ್ನಗಿರಿ:ತಾಲೂಕಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ವಸತಿಯುತ ಪ್ರೌಢಶಾಲೆ ದೊಡ್ಡಘಟ್ಟ ಗ್ರಾಮದಲ್ಲಿ ‘ಗುರುಗಳ ನಿಸ್ವಾರ್ಥ ಸೇವೆಗಾಗಿ -1999-2000’ ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಕಳೆದ ಭಾನುವಾರ (24ನೇ ತಾರೀಖು) ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಭೂದಾನಿಗಳಾದ ದಿ|| ರುದ್ರಯ್ಯ ನವರ ಮೊಮ್ಮಗರಾದ ಶ್ರೀ ಡಿ.ಎಸ್.ಮಂಜುನಾಥ್* ವಹಿಸಿಕೊಂಡಿದ್ದರು. ಎಲ್ಲಾ ಶಿಕ್ಷಕರನ್ನು ಹೃದಯ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಚ್.ಎಸ್.ಹಾಲೇಶಪ್ಪ , ಎಸ್.ತಿಮ್ಮಯ್ಯ , ಸಿದ್ದಪ್ಪ , ಎಂ.ವಿ.ಈಶ್ವರಪ್ಪ , ಕೆ.ಗಂಗಾದರಪ್ಪ , ಸಿ.ಬೂದಿಬಸಪ್ಪ ಕೃಷ್ಣಪ್ಪ ಉಪಸ್ಥಿತರಿದ್ದು ಎಲ್ಲಾ ಶಿಕ್ಷಕರು ತಮ್ಮ ಹಿಂದಿನ ವೃತ್ತಿ ಜೀವನದಲ್ಲಿ ಇದ್ದಂತಹ ಪರಿಸ್ಥಿತಿಯನ್ನು ನೆನೆದು ಹಳೆಯ ವಿದ್ಯಾರ್ಥಿಗಳು ಶಾಲೆಗೆ ನೀಡಿದ ಸಹಾಯವನ್ನು ಸ್ಮರಿಸಿದರು.
ಹಾಗೆಯೇ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಇರಿಸಿದ ಗೌರವದಿಂದ ಇಂತಹ ಅವಿಸ್ಮರಣೀಯ ದಿನವನ್ನು ಸ್ಮರಿಸುವಂತೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.
ಗುರುಗಳ ಬಗ್ಗೆ ಗೌರವ ಪ್ರೀತಿಯಿಂದಾಗಿ 25 ವರ್ಷಗಳ ನಂತರ ಗುರುಗಳಿಗಾಗಿ ಗೌರವ ಸಮರ್ಪಣೆಯನ್ನು ಮಾಡುವುದರ ಮೂಲಕ ಅಪರೂಪದ ಕಾರ್ಯಕ್ರಮವನ್ನು ನೇರವೇರಿಸಿದ 1999-2000 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಈ ಕಾರ್ಯ ಮುಂಬರುವ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶರ್ಮತ್ ಐ ಕಣದಮನಿ ಮತ್ತು ಶ್ರೀಮತಿ ರೂಪ.ಕೆ.ಎಸ್. ಇವರು ನಿರ್ವಹಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ಡಿ.ಸಿ.ಮಾಲತೇಶ್ ನೇರವೇರಿಸಿದರು. ಪ್ರಾರ್ಥನೆಯನ್ನು ಶ್ರೀಮತಿ ರೂಪ.ಕೆ.ಎಸ್, ಲಕ್ಷ್ಮಿ ಮತ್ತು ಸುನೀತಾ ಅವರು ನೇರವೇರಿಸಿದರು.ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಮುರುಳಿಮೋಹನ. ಎಸ್.ಯು. ಹಾಗೂ ಪ್ರಾಸ್ತಾವಿಕ ನುಡಿಯನ್ನು ಶ್ರೀ ಪಿ.ದೂದ್ ಪೀರ್ ಅವರು ಗುರುಗಳ ಮಹತ್ವ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಕೆ.ಸುರೇಶ್ ಅವರು ವಹಿಸಿಕೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243