ದಿನದ ಸುದ್ದಿ
ದೊಡ್ಡಘಟ್ಟ | ಮಾ.14ರಂದು ‘ಸಾಮರಸ್ಯ ಸಂಭ್ರಮ ವೇದಿಕೆ’ಯಿಂದ ವಿಷೇಶ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ
ಸುದ್ದಿದಿನ, ದಾವಣಗೆರೆ-ಚನ್ನಗಿರಿ: ನಮ್ಮನ್ನಗಲಿರುವ ನಮ್ಮೂರಿನ ಎಲ್ಲಾ ಹಿರಿಯ ಜೀವಗಳ ಸ್ಮರಣಾರ್ಥ ನಮ್ಮೂರಿನ ಸರ್ವ ಸಮಾಜದ ಸಮಾನ ಮನಸ್ಕರರು ಸೇರಿ ಸಂಘಟಿಸಿರುವ ‘ಸಾಮರಸ್ಯ ಸಂಭ್ರಮ ವೇದಿಕೆ’ಯ ಅಡಿಯಲ್ಲಿ ಮಾರ್ಚ್ 14 ರ ಭಾನುವಾರ ವಿನೂತ ಕಾರ್ಯಕ್ರಮವನ್ನು ದೊಡ್ಡಘಟ್ಟ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ರಾಘುದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಉಪನ್ಯಾಸ – ಸನ್ಮಾನ ಕಾರ್ಯಕ್ರಮ
ಅಂದು ‘ಸಾಮರಸ್ಯಕ್ಕಾಗಿ ಸಂಕಲ್ಪ’ ಎಂಬ ವಿಶೇಷ ಉಪನ್ಯಾಸವನ್ನು ಪ್ರೊ.ಎ.ಬಿ.ರಾಮಚಂದ್ರಪ್ಪ ಮಾಡಲಿದ್ದಾರೆ. ಹಾಗೆ ಸರ್ವ ಸಮಾಜದ ಹಿರಿಯರಿಗೆ, ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಹಾಗೂ ದೊಡ್ಡಘಟ್ಟ್ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಸನ್ಮಾನ ಮಾಡಲಾಗಿತ್ತದೆ.
ಹಾಗೂ ಪಬ್ಲಿಕ್ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನೀರುಗಂಟಿಗಳು, ಮತ್ತು ದೊಡ್ಡಘಟ್ಟ ಗ್ರಾಮದ SSLC ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತದೆ.
ಪುಸ್ತಕ ಬಿಡುಗಡೆ
ಜತೆಗೆ ಷಕೀಬ್ ಎಸ್ ಕಣದಮನೆ, ನವಿಲೇಹಾಳ್ ಅವರ ‘ಮೋಹದ ಮೋಡಗಳು, ಕವನ ಸಂಕಲನ ಬಿಡುಗಡೆಯನ್ನು ಕವಿ ಸಂತೇಬೆನ್ನೂರು ಫೈಜ್ನಟ್ರಾಜ್ ಮಾಡಲಿದ್ದಾರೆ.
ಇದನ್ನೂ ಓದಿ |ಎರಡನೇ ಮದುವೆಗೆ ಕುಟುಂಬದವರು ಒಪ್ಪದ ಕಾರಣ ಕರೆಂಟ್ ಕಂಬ ಏರಿದ ವೃದ್ಧ..!
ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ ಸದಸ್ಯರಾದ ತೇಜಸ್ವಿ ಪಟೇಲ್ ಮಾಡಲಿದ್ದು, ಅಧ್ಯಕ್ಷತೆಯನ್ನು ದೊಡ್ಡಘಟ್ಟ ಗ್ರಾಮದ ಹಿರಿಯ ಮುಖಂಡರಾದ ವಿ.ಬಾಲಚಂದ್ರ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಭೀಮಪ್ಪ, ಕೋಟೆ ಚಂದ್ರಯ್ಯ, ಡಿ.ಆರ್. ಶ್ರೀನಿವಾಸ್ ,ಡಿ.ಎನ್. ಜಯಪ್ಪ, ಡಿ.ಆರ್, ಶಿವಮೂರ್ತಿ, ಗೌಡ್ರು ಶಾಂತಕುಮಾರ್, ಎಸ್.ಸಿ. ಪ್ರಭುದೇವ್,ಸನಾವುಲ್ಲಾ, ಡಿ.ಹೆಚ್, ಜಯಪ್ಪ (ನ್ಯಾಯಬೆಲೆ), ಫಕ್ಕೀರಪ್ಪ (ಛತ್ರದ ವ್ಯಾಪಾರಿ),ಬೀರೂರು ಶ್ರೀನಿವಾಸ, ಡಿ.ಎಂ. ಕುಬೇರಪ್ಪ (ಮಡಿವಾಳ),ಚಂದ್ರಾಚಾರ್, ಆರ್. ಗಂಗಪ್ಪ, ಸ್ವಾಮಿ (ಛಲವಾದಿ) ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243