ದಿನದ ಸುದ್ದಿ

ಉನ್ನತ ಶಿಕ್ಷಣ ಪಡೆಯಲು ಪಾಕಿಸ್ತಾನಕ್ಕೆ ತೆರಳಬಾರದು : ಯುಜಿಸಿ

Published

on

ಸುದ್ದಿದಿನ ಡೆಸ್ಕ್ : ಉನ್ನತ ಶಿಕ್ಷಣ ಪಡೆಯಲು ಪಾಕಿಸ್ತಾನಕ್ಕೆ ತೆರಳಬಾರದೆಂದು ವಿಶ್ವವಿದ್ಯಾಲಯ ಅನುದಾನ ಆಯೋಗ-ಯುಜಿಸಿ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ.

ಈ ಕುರಿತು ಎರಡೂ ಸಂಸ್ಥೆಗಳು ಸಾರ್ವಜನಿಕ ಸೂಚನೆ ಹೊರಡಿಸಿದ್ದು, ಯಾವುದೇ ಭಾರತೀಯ ಪ್ರಜೆ ಅಥವಾ ಅನಿವಾಸಿ ಭಾರತೀಯರು ಪಾಕಿಸ್ತಾನದಲ್ಲಿನ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಉದ್ದೇಶಿಸಿದ್ದರೆ ಅಂತಹವರು ಭಾರತದಲ್ಲಿ ಉದ್ಯೋಗ ಪಡೆಯಲು ಅಥವಾ ಉನ್ನತ ಶಿಕ್ಷಣ ಮುಂದುವರೆಸಲು ಅರ್ಹರಾಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಪಾಕಿಸ್ತಾನದಲ್ಲಿ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ಬಲಸೆ ಬಂದಿರುವವರು ಮತ್ತು ಅವರ ಮಕ್ಕಳು ಭಾರತದ ಪೌರತ್ವ ಪಡೆದಿದ್ದಲ್ಲಿ ಅಂತಹವರು ಗೃಹ ಸಚಿವಾಲಯದಿಂದ ಭದ್ರತಾ ಅನುಮೋದನೆ ಲಭಿಸಿದ ನಂತರ ಭಾರತದಲ್ಲಿ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version