ದಿನದ ಸುದ್ದಿ

ವರದಕ್ಷಿಣೆ ಕಿರುಕುಳ: ವೈದ್ಯೆ ಆತ್ಮಹತ್ಯೆ..!

Published

on

ಸುದ್ದಿದಿನ ಡೆಸ್ಕ್ : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು (24) ಯುವ ವೈದ್ಯೆ ವಿಸ್ಮಯ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಂಕೋಟಾ ಬಳಿಯ ಸಾಸ್ತಮ್ನಾಡದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಗಂಡನ ಮನೆಯಲ್ಲಿ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಸಾವಿಗೂ ಮುನ್ನ ವಿಸ್ಮಯ ತನ್ನ ಸೋದರ ಸಂಬಂಧಿ ಜೊತೆ ನೋವನ್ನು ತೋಡಿಕೊಂಡಿದ್ದಾರೆ. ಪತಿಯ ಚಿತ್ರ ಹಿಂಸೆಯನ್ನು ಸಹಿಸಲಾಗುತ್ತಿಲ್ಲ, ವರದಕ್ಷಿಣೆ ಬೇಕೆಂದು ನಿತ್ಯ ಹಿಂಸೆ ನೀಡುತ್ತಿದ್ದಾನೆ ಎಂದು ತಿಳಿಸಿದ್ದಾಳೆ.

ಮರುದಿನ ಬೆಳಗ್ಗೆ ವಿಸ್ಮಯ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿವೆ. ಮಗಳ ಸಾವಿಗೆ ಆಕೆಯ ಪತಿಯೇ ಕಾರಣ, ಮದುವೆ ಸಮಯದಲ್ಲಿ ಒಂದು ಎಕರೆ ಭೂಮಿ, ಒಂದು ಕಾರನ್ನು ನೀಡಲಾಗಿದೆ. ಆದರೂ ಅಳಿಯನ ಹಣದಾಹ ಕಡಿಮೆಯಾಗಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ | ದಾವಣಗೆರೆ | ಪುಸ್ತಕ, ಸ್ಟೇಷನರಿ ಹಾಗೂ ಮೊಬೈಲ್ ಅಂಗಡಿಗಳು ತೆರೆಯಲು ಅನುಮತಿ 

ಇದೀಗ ಆರೋಪಿ ಕಿರಣ್ ಕುಮಾರ್ ನನ್ನು ಬಂಧಿಸಲಾಗಿದೆ.
ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ ವಿದ್ಯಾರ್ಥಿನಿಯಾಗಿದ್ದ ವಿಸ್ಮಯ 2020ರ ಮೇ ತಿಂಗಳಲ್ಲಿ ಮೋಟಾರು ವಾಹನ ಇಲಾಖೆಯ ಅಧಿಕಾರಿ ಎಸ್.ಕಿರಣ್‍ಕುಮಾರ್ ಜೊತೆ ವಿವಾಹವಾಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version