ಬಹಿರಂಗ

ಜಾತಿ ನಿರ್ಮೂಲನೆಯ ಉಪಾಯವೆಂದರೆ ಅಂತರ್ಜಾತಿಯ ವಿವಾಹ : ಡಾ.ಬಿ.ಆರ್. ಅಂಬೇಡ್ಕರ್ ಈ ಬರಹ ನಿಮಗಾಗಿ

Published

on

ಅಂತರ್ಜಾತಿ ಸಹಭೋಜನದಿಂದ ಜಾತಿ ನಿರ್ಮೂಲನೆಯನ್ನು ಸಾಧಿಸಬೇಕೆಂಬ ಇನ್ನೊಂದು ಯೋಜನೆಯನ್ನು ಸೂಚಿಸಲಾಗುತ್ತದೆ. ಇದು ಕೂಡ ಅಸಮರ್ಪಕ ಉಪಾಯವೆಂದು ನಾನು ಪರಿಗಣಿಸುತ್ತೇನೆ.

ಅಂತರ್ಜಾತೀಯ ಸಹಭೋಜನಕ್ಕೆ ಅವಕಾಶಕೊಡುವಂತಹ ಜಾತಿಗಳು ಅನೇಕ ಇವೆ. ಅನೇಕ ಜಾತಿಯವರು ಕೂಡಿ ಊಟ ಮಾಡುವುದರಿಂದ ಜಾತಿ ಭಾವನೆಯೇನೂ ನಷ್ಟವಾಗಿಲ್ಲ, ಜಾತಿಪ್ರಜ್ಞೆಯೂ ಅಳಿದಿಲ್ಲ. ಅಂತರ್ಜಾತೀಯ ವಿವಾಹವೇ ಸರಿಯಾದ ಉಪಾಯವೆಂದು ನನಗೆ ಮನವರಿಕೆಯಾಗಿದೆ. ತಾವು ತಮ್ಮವರೆಂಬ ಆತ್ಮೀಯ ಭಾವನೆ ರಕ್ತ ಸಂಬಂಧದಿಂದಲೇ ಬರಬಲ್ಲದು.

ಈ ಆತ್ಮೀಯತೆಯ ಮಮತೆಯ ಭಾವನೆ ಹುಟ್ಟದೆಹೋದರೆ ಜಾತಿಪದ್ಧತಿಯಿಂದ ಬೆಳೆದುಬಂದ ಪ್ರತ್ಯೇಕತಾಭಾವನೆ ಅಳಿಯಲಾರದು. ಹಿಂದೂಗಳಲ್ಲದವರ ಜೀವನದಲ್ಲಿ ಅಂತರ್ಜಾತೀಯ ವಿವಾಹಕ್ಕೆ ಅಷ್ಟು ಮಹತ್ವವಿರಲಿಕ್ಕಿಲ್ಲ. ಹಿಂದೂಗಳಲ್ಲಿ ಮಾತ್ರ ಅದು ನಿಶ್ಚಿತವಾಗಿ ಮಹತ್ವದ ಘಟಕವಾಗುತ್ತದೆ.

ಇತರ ಸಂಬಂಧಗಳಿಂದ ಸಮಾಜ ಸುಸಂಘಟಿತವಾಗಿರುವಾಗ ಮದುವೆಯೆಂಬುದು ಜೀವನದಲ್ಲಿ ಒಂದು ಸಾಮಾನ್ಯ ಘಟನೆಯೆನ್ನಿಸುತ್ತದೆ. ಆದರೆ ಸಮಾಜ ಛಿನ್ನವಿಚ್ಛಿನ್ನವಾಗಿದ್ದಾಗ ಸಂಯೋಜಕ ಶಕ್ತಿಯಾಗಿ ಬರುವ ವಿವಾಹ ಸಂಬಂಧ ಅಗತ್ಯದ ವಿಷಯವಾಗುತ್ತದೆ. ಜಾತಿ ನಿರ್ಮೂಲನೆಯ ಉಪಾಯವೆಂದರೆ ಅಂತರ್ಜಾತಿಯ ವಿವಾಹವೇ. ಬೇರೆ ಯಾವುದರಿಂದಲೂ ಜಾತಿ ಸಮಸ್ಯೆ ಪರಿಹಾರವಾಗುವುದಿಲ್ಲ .

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version