ಬಹಿರಂಗ

ಜಾತಿನಾಶ, ಶಾಸ್ತ್ರಗಳಲ್ಲಿ ಜನರಿಗಿರುವ ನಿಷ್ಠೆ : ಡಾ.‌ಬಿ.ಆರ್.‌ಅಂಬೇಡ್ಕರ್ ಹೇಳಿರೋದಿಷ್ಟು..!

Published

on

ಜಾತಿಯೆಂಬುದು ಇಟ್ಟಿಗೆಗಳ ಒಂದು ಗೋಡೆಯಲ್ಲ ಅಥವಾ ಮುಳ್ಳುತಂತಿಯ ಬೇಲಿಯಲ್ಲ ಅದನ್ನು ಕೈಯಿಂದ ಕಿತ್ತುಹಾಕುವಂತಿಲ್ಲ. ಜಾತಿ ಒಂದು ಮನೋಭಾವ, ಜಾತಿನಾಶವೆಂದರೆ ಅದೊಂದು ಭೌತಿಕ ವಸ್ತುವಿನ ನಾಶವಲ್ಲ, ಮನೋವೃತ್ತಿಯ ಪರಿವರ್ತನೆಯಾಗಬೇಕು.

ಜಾತಿ ಕೆಟ್ಟದಿರಬಹುದು, ಹಿಂದೂಗಳೂ ಜಾತಿಯನ್ನು ಪಾಲಿಸುವರೆಂದಾಕ್ಷಣಕ್ಕೆ ಅವರು ರಾಕ್ಷಸರೆಂದಾಗಲಿ ತಲೆತಿರುಕರೆಂದಾಗಲಿ ಅರ್ಥವಲ್ಲ. ಜಾತಿಪಾಲನೆಗೆ ಅವರ ಧರ್ಮಕರ್ಮಠತೆಯೂ ಕಾರಣವಾಗಿದೆ. ಜಾತಿ ಪರಿಪಾಲನೆ ಜನರ ತಪ್ಪಲ್ಲ. ನಿಜವಾಗಿ ತಪ್ಪಿರುವುದು ಜಾತಿಯ ಬಗೆಗೆ ಧರ್ಮವುಂಟುಮಾಡಿದ ಕಲ್ಪನೆಯಲ್ಲಿ ಈ ಮಾತು ಸರಿಯಾದರೆ, ನೀವು ಎದುರಿಸಬೇಕಾದ ವೈರಿ ಜಾತಿನಿಷ್ಠ ಜನರಲ್ಲ ; ಅವರಿಗೆ ಈ ಧರ್ಮವನ್ನು ಬೋಧಿಸಿದ ಶಾಸ್ತಗಳೇ ಶತ್ತು, ಅಂತರ್ಜಾತೀಯ ಭೋಜನ ವಿವಾಹಗಳನ್ನೇಕೆ ಮಾಡುವುದಿಲ್ಲವೆಂದು ಜನರನ್ನು ಟೀಕಿಸುವುದರಿಂದ ಅಥವಾ ಆಗೀಗ ಅಂತರ್ಜಾತೀಯ ಭೋಜನ ವಿವಾಹಗಳನ್ನು ಏರ್ಪಡಿಸುವುದರಿಂದ ನಿಮ್ಮ ಉದ್ದೇಶ ಈಡೇರಲಾರದು.

ಜಾತಿನಾಶ ಮಾಡಲು ಶಾಸ್ತ್ರಗಳಲ್ಲಿ ಜನರಿಗಿರುವ ನಿಷ್ಠೆಯನ್ನು ನಾಶಪಡಿಸುವುದೇ ನಿಜವಾದ ಮಾರ್ಗ. ಶಾಸ್ತ್ರಗಳು ಜನರಲ್ಲಿ ನಂಬಿಕೆಗಳನ್ನೂ, ಅಭಿಪ್ರಾಯಗಳನ್ನೂ ರೂಪಿಸುತ್ತ ಮುಂದುವರಿಯುವುದಾದರೆ ನಿಮಗೆ ಗೆಲುವಿನ ನಿರೀಕ್ಷೆಯೆಲ್ಲಿ ? ಶಾಸ್ತ್ರಗಳ ಅಧಿಕಾರವನ್ನು ನೀವು ಪ್ರಶ್ನಿಸುವುದಿಲ್ಲ, ಶಾಸ್ತ್ರಗಳನ್ನು ಗೌರವಿಸಿ ನಂಬುವುದಕ್ಕೂ ಅವಕಾಶ ಕೊಡುತ್ತೀರಿ, ಶಾಸ್ತ್ರಗಳ ವಿಧಿನಿಷೇಧಗಳನ್ನು ಅವರು ನಂಬಲು ಅಡ್ಡಿ ಮಾಡಿಲ್ಲ. ಇಷ್ಟೆಲ್ಲ ಇದ್ದು ಆ ಜನರನ್ನು ಅವಿವೇಕಿಗಳೆಂದೂ ನಿರ್ದಯರೆಂದೂ ಟೀಕಿಸುವುದು ಅಸಂಬದ್ಧವಲ್ಲವೆ ? ಇದು ಸಮಾಜ ಸುಧಾರಣೆಯ ಮಾರ್ಗವೇ ?
ಜನರ ನಡವಳಿಕೆಗೆ ಶಾಸ್ತ್ರಗಳಲ್ಲಿರುವ ಅವರ ನಂಬಿಕೆ ಕಾರಣ .

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version