ಬಹಿರಂಗ
ಜಾತಿಗ್ರಸ್ತ ಮನಸ್ಸುಳ್ಳ ಭಾರತದಲ್ಲಿ : ಡಾ. ಬಿ.ಆರ್. ಅಂಬೇಡ್ಕರ್ ಅವರ ಈ ಬರಹ ಮಿಸ್ ಮಾಡ್ದೆ ಓದಿ….!
ಭಾರತದಂಥ ಜಾತಿಗ್ರಸ್ತ ಮನಸ್ಸಳ್ಳ ಒಂದು ಪರಿಸರದಲ್ಲಿ ಅಧಿಕಾರದಲ್ಲಿರುವವರು ತಮ್ಮ ಜಾತಿಯವರಲ್ಲದವರ ಬಗ್ಗೆ ತಾರತಮ್ಯ ಮಾಡುವುದಿಲ್ಲವೆಂದು ಭಾವಿಸುವುದು ಕಷ್ಟ. ಈ ಪರಿಸರದಲ್ಲಿ ಅಸ ಶರನು ನಡೆಸಿಕೊಳುವುದಂತೂ ಅತಿನಿಕಷವಾಗಿ, ಹಿಂದೂ ಅಧಿಕಾರಿಗಳು ಅಸಶ್ರರನ್ನು ನಡೆಸಿಕೊಳ್ಳುವ ಬಗ್ಗೆ 5ನೇ ನವೆಂಬರ್ 1892ನೇ, ಸಂಖ್ಯೆ 723 ಮದ್ರಾಸ್ ಸರ್ಕಾರದ ಕಂದಾಯ ಮಂಡಳಿಯ ನಡಾವಳಿ ಒಂದು ಸ್ಪಷ್ಟ ಚಿತ್ರಣ ನೀಡುತ್ತದೆ. ಆ ವರದಿ ಹೇಳುತ್ತದೆ. 134ಇಲ್ಲಿಯವರೆಗೆ ಅಸ್ಪಶ್ಯರ ಮೇಲೆ ನಡೆಯುತ್ತಿದ್ದ ವಿವಿಧ ರೀತಿಯ ದಬ್ಬಾಳಿಕೆಗಳ ಸ್ವರೂಪ ಮಾತ್ರ ತಿಳಿದಿತ್ತು. ಅದನ್ನು ಸ್ವಲ್ಪ ವಿವರಿಸುವ ಅಗತ್ಯ ಇದೆ.
- ಪಾರಯ್ಯ ( ಮದ್ರಾಸ್ ಪ್ರಾಂತದ ಒಂದು ಅಸ್ಪಶ್ಯಶಾತಿ ) ಜನರನ್ನು ಶಿಕ್ಷಿಸಲು ಅವರ ಯಜಮಾನರು – ಅವರ ಮೇಲೆ ಗ್ರಾಮ ಪಂಚಾಯಿತಿ ಅಥವಾ ಕ್ರಿಮಿನಲ್ ಕೋರ್ಟುಗಳಲ್ಲಿ ಸುಳ್ಳು ಕೇಸುಗಳನ್ನು ಹಾಕುತ್ತಾರೆ.
- ಸರ್ಕಾರಕ್ಕೆ ಅರ್ಜಿಸಲ್ಲಿಸಿ ಪಾರಯ್ಯ ಕೇರಿಗಳ ಸುತ್ತ ಇರುವ ಹಾಲಿ ಜಮೀನನ್ನು ಮಂಜೂರು ಮಾಡಿಸಿಕೊಂಡು ಅವರ ದನಕರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅಥವಾ ಅವರು ದೇವಸ್ಥಾನಕ್ಕೆ ಹೋಗುವ ದಾರಿಗೆ ಅಡ್ಡಬಂದು ತೊಂದರೆ ಕೊಡುವುದು.
- ಪಾರಯ್ಯ ಕೇರಿಗಳಿರುವ ಪ್ರದೇಶವನ್ನು ಮಿರಾಸಿದಾರರು ತಮ್ಮ ಹೆಸರಿನಲ್ಲಿರುವಂತೆ ತಪ್ಪಾಗಿ ಸೇರಿಸಿಕೊಂಡು ತಗಾದೆ ಮಾಡುವುದು.
- ಪಾರಯ್ಯಗಳ ಗುಡಿಸಿಲುಗಳನ್ನು ಕೆಡವಿ ಅವರ ಮನೆಯ ಅಕ್ಕಪಕ್ಕ ಇರುವ ಬೆಳೆಯನ್ನು ನಾಶಮಾಡುವುದು.
- ಲಾಗಾಯು ಮಾಡುತ್ತಿದ್ದ ಭೂಮಿಯ ಮೇಲಿನ ಅವರ ಹಕ್ಕು ನಿರಾಕರಿಸುವುದು. ಪಾರಯ್ಯಗಳ ಜಮೀನುಗಳಲ್ಲಿನ ಫಸಲನ್ನು ಬಲಾತ್ಕಾರವಾಗಿ ಕಟಾವು ಮಾಡಿ, ಅವರು ಅದನ್ನು ವಿರೋಧಿಸಿದಾಗ ಅವರ ಮೇಲೆ ಕಳ್ಳತನ ಮತ್ತು ದೊಂಬಿಯ ಆಪಾದನೆ ಮಾಡುವುದು.
- ಅವರಿಗೆ ಮೋಸಮಾಡಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಅವರ ನಾಶಕ್ಕೆ ಕಾರಣರಾಗುವುದು.
- ಪಾರಯ್ಯ ಭೂಮಿಗಳಿಗಿರುವ ನೀರಿನ ಆಸರೆಯನ್ನು ತಪ್ಪಿಸುವುದು.
- ಉಪಗೇಣಿದಾರರ ಭೂಮಿಯನ್ನು ‘ ಗೇಣಿ ಬಾಕಿಯಿದೆ ” ಎಂಬ ನೆಪದಲ್ಲಿ ಕಾನೂನಿನ ಯಾವ ನಿಯಮವನ್ನೂ ಪಾಲಿಸದೆ ವಶಕ್ಕೆ ತೆಗೆದುಕೊಳ್ಳುವುದು .
“ 135, ಈ ಅನ್ಯಾಯಗಳ ವಿರುದ್ದ ದೂರು ಕೊಡಲು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಿವೆ. ಎಂದು ಹೇಳಲಾಗುತ್ತದೆ. ಕೋರ್ಟುಗಳಿವೆ ನಿಜ. ಆದರೆ ಭಾರತ ದೇಶ ಕೋರ್ಟು ಮೆಟ್ಟಿಲು ಹತ್ತಬಲ್ಲ ಛಾತಿ ಉಳ್ಳವರನ್ನು ಸೃಷ್ಟಿಸುತ್ತಿಲ್ಲ. ನ್ಯಾಯಾಲಯಕ್ಕೆ ಹೋಗಲು ಬೇಕಾದ ಹಣ, ಖಟ್ಟೆ ನಡೆಯುವಷ್ಟು ಕಾಲ ಜೀವಿಸಲು ಬೇಕಾದ ಸಂಪತ್ತು ಬೇಕಲ್ಲವೇ ? ಮೇಲಾಗಿ ಈ ರೀತಿಯ ಬಹಳಷ್ಟು ಕೇಸುಗಳ ಮೊದಲನೆ ಕೋರ್ಟಿನ ಹಂತದಲ್ಲೇ ತೀರ್ಮಾನವಾಗಿಬಿಡುತ್ತದೆ. ಈ ಕೋರ್ಟುಗಳು ಅನೇಕವೇಳೆ ಮಹಾಭ್ರಷ್ಟ ಅಧಿಕಾರಿಗಳ ಕೈಯಲ್ಲಿರುತ್ತವೆ. ಹಾಗೂ ಹಲವಾರು ಕಾರಣಗಳಿಗಾಗಿ ಇವರು ತಮ್ಮ ವರ್ಗಕ್ಕೆ ಸೇರಿದವರಾದ ಭೂಮಾಲಿಕರ ಪರವಾಗಿರುತ್ತಾರೆ.
“ 136, ಈ ಅಧಿಕಾರಿವರ್ಗ ಬೇರೆ ಅಧಿಕಾರಿಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ಹೆಚ್ಚು ಹೇಳಬೇಕಾದದ್ದೇನೂ ಇಲ್ಲ. ಭಾರತೀಯ ಅಧಿಕಾರಗಳ ಮೇಲಿನ ಅವರ ಪ್ರಭಾವ ವಿಪರೀತವಾದದ್ದಾದರೆ, ಯೂರೋಪಿಯನ್ನರ ಮೇಲಿನ ಪ್ರಭಾವವಂತೂ ಹೇಳಲಸದಳ. ಮೇಲಿನಿಂದ – ಕೆಳಗಿನವರೆಗಿನ ಎಲ್ಲ ಆಫೀಸುಗಳನ್ನೂ ಈ ಅಧಿಕಾರಗಳ ಪ್ರತಿನಿಧಿಗಳು ತುಂಬಿರುತ್ತಾರೆ. ಅವರ ಹಿತಕ್ಕೆ ಧಕ್ಕೆ ತರುವಂಥದ್ದೇನೂ ಆಗಲು ಸಾಧ್ಯವಿಲ್ಲ. ಆದರೂ ಒಂದು ಕೇಸಿನ ದಾಖಲಾತಿಯಿಂದ ಹಿಡಿದು ಅದರ ತೀರ್ಮಾನವಾಗುವ ಎಲ್ಲ ಹಂತಗಳಲ್ಲೂ ಅಧಿಕಾರಗಳ ಪ್ರಭಾವ ಎಡೆಬಿಡದೆ ನಡೆದೇ ಇರುತ್ತದೆ.
” ಪಂಜಾಬ್ ಭೂ ವರ್ಗಾವಣೆಗೆ ಕಾಯ್ದೆಯ ಶಾಸಕಾಂಗವೊಂದು ಅಸ್ಪಶ್ಯರ ಮೇಲೆ ದಬ್ಬಾಳಿಕೆ ನಡೆಸುವುದಕ್ಕೊಂದು ನಿದರ್ಶನ. ಬಹುಸಂಖ್ಯಾತರ ದಬ್ಬಾಳಿಕೆಯಿಂದ ಹಲವಾರು ಅಲಸಂಖ್ಯಾತರು ನರಳುತ್ತಿರಬಹುದು. ಆದ್ದರಿಂದಲೇ ಭಾರತದ ಎಲ್ಲ ಪ್ರಜೆಗಳಿಗೂ ಕಾನೂನಿನ ರಕ್ಷಣೆ ಮತ್ತು ಪ್ರಯೋಜನ ಸಿಗಬೇಕೆಂಬ ನಿಯಮ ಇರತಕ್ಕದ್ದು. ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ಸು ಇದೇ ರೀತಿಯ ನೀಗಳ ವಿರುದ್ದದ ದಬ್ಬಾಳಿಕೆಯ ವಿರುದ್ದ 1899ಮತ್ತು 1ಮಾರ್ಚ್ 1875 ರಲ್ಲಿ ಪಾಸು ಮಾಡಿದ ನಾಗರಿಕ ಹಕ್ಕುಗಳ ರಕ್ಷಣಾ ವಿಧಿಯಿಂದ ಈ ಕಲಮು 2 ರ ವಿವರಗಳನ್ನು ತೆಗೆದುಕೊಳ್ಳಲಾಗಿದೆ .
–ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು – ಭಾಷಣಗಳು : ಸಂಪುಟ – 1
ಖಂಡ 2
ಸುದ್ದಿದಿನ.ಕಾಂ|ವಾಟ್ಸಾಪ್|9986715401