ಬಹಿರಂಗ

ಶೋಷಿತ ಸಮುದಾಯಗಳ ಸಮಸ್ಯೆ ಆರ್ಥಿಕ ಸಮಸ್ಯೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್

Published

on

ಲ್ಲರೂ ಶೋಷಿತ ಸಮುದಾಯಗಳ ಸಮಸ್ಯೆ ಕೇವಲ ರಾಜಕೀಯ ಸಮಸ್ಯೆ ಎಂದೇ ಆಗಾಗ ಮಾತನಾಡುತ್ತಾರೆ. Ofcourse ಅದು ರಾಜಕೀಯ ಸಮಸ್ಯೆ ಇರಬಹುದು. ಆದರೆ ಅದೇ ಅಂತಿಮ ಆಯಾಮ ಅಲ್ಲ.

ಯಾಕೆಂದರೆ 1932 ರ ಪೂನಾ ಒಪ್ಪಂದದ ಸಂದರ್ಭದಲ್ಲಿ ಶೋಷಿತ ಸಮುದಾಯಗಳ ಸಮಸ್ಯೆಯನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವ ಬಾಬಾಸಾಹೇಬ್ ಅಂಬೇಡ್ಕರ್ ರವರು 1950ರ ಹೊತ್ತಿಗೆ (24-5-1950) ಹೈದರಾಬಾದ್ ನಲ್ಲಿ ಪ್ರಗತಿಪರರ ವೇದಿಕೆಯೊಂದರಲ್ಲಿ ಹೇಳುವುದು “ಅಸ್ಪೃಶ್ಯತಾಚರಣೆಯ ಸಮಸ್ಯೆಯು ಈಗೀಗ ಇಂಡಿಯಾದಲ್ಲಿ ಆರ್ಥಿಕ ಆಯಾಮದ ರೂಪ ಪಡೆದುಕೊಳ್ಳುತ್ತಿದೆ.

ಹಿಂದೆ ಹೀಗಿರಲಿಲ್ಲ. ಹಾಗೆಯೇ ಐದಾರು ವರ್ಷಗಳ ಹಿಂದೆ ದೇಶದಲ್ಲಿ ಅಸ್ಪೃಶ್ಯರು ಇದ್ದ ರೀತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ಅಂತರವಿದೆ. ಅಸ್ಪೃಶ್ಯರು ಸಾಕಷ್ಟು ಮುಂದುವರಿದಿದ್ದಾರೆ. ಇನ್ನೂ ಮುಂದುವರೆಯುತ್ತಿದ್ದರು. ಆದರೆ ಈ ದಿಸೆಯಲ್ಲಿ ಅವರಿಗೆ ಸಾಕಷ್ಟು ಅಡೆತಡೆಗಳು ಎದುರಾಗಿವೆ” ಎನ್ನುತ್ತಾರೆ.

(Babasaheb Ambedkar writings, Vol,17, Part 2, Pp.380). ಈ ನಿಟ್ಟಿನಲ್ಲಿ ನಮಗೆ ಅರ್ಥ ಆಗಬೇಕಿರುವುದು ಶೋಷಿತ ಸಮುದಾಯಗಳ ಸಮಸ್ಯೆ ಆರ್ಥಿಕ ಸಮಸ್ಯೆಯೂ ಕೂಡ ಹೌದು ಮತ್ತು ಅದನ್ನು ಸ್ವತಃ ಬಾಬಾಸಾಹೇಬ್ ಅಂಬೇಡ್ಕರರೇ ಬಹಳ ವರ್ಷಗಳ ಹಿಂದೆಯೇ ಗುರುತಿಸಿದ್ದಾರೆ ಎಂಬುದು.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version