ಬಹಿರಂಗ
ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು : ಮರೆಯದೆ ಓದಿರಿ ಡಾ. ಬಿ.ಆರ್.ಅಂಬೇಡ್ಕರ್ ಈ ಬರಹ
ಅನಾಗರಿಕ ಬುಡಕಟ್ಟಿನವರನ್ನು ಉದ್ಧರಿಸುವ ಮಾನವೀಯ ಕಾವ್ಯಕ್ಕೆ ಹಿಂದೂಗಳು ಪ್ರಯತ್ನಿಸಲಿಲ್ಲವೆಂಬುದಷ್ಟೇ ಅಲ್ಲ, ಹಿಂದೂಗಳಲ್ಲಿ ಮೇಲು ಜಾತಿಯೆನಿಸಿಕೊಂಡವರು ತಮ್ಮಲ್ಲಿಯೇ ಇರುವ ಕೆಳಜಾತಿಯವನನ್ನು ಸಾಂಸ್ಕೃತಿಕವಾಗಿ ತಮ್ಮ ಮಟ್ಟಕ್ಕೆ ಏರಗೊಡಲಿಲ್ಲ ನಾನು ಇದಕ್ಕೆ ಎರಡು ನಿದರ್ಶನಗಳನ್ನು ಕೊಡುತ್ತೇನೆ. ಒಂದು ಸೋನಾರರದ್ದು, ಇನ್ನೊಂದು ಪಠರೇ ಪ್ರಭುಗಳದ್ದು. ಇವೆರಡು ಮಹಾರಾಷ್ಟ್ರದಲ್ಲಿ ಸುಪರಿಚಿತವಾದ ಎರಡು ಜಾತಿಗಳು, ತಮ್ಮ ದರ್ಜೆಯನ್ನು ಎತ್ತರಿಸಿಕೊಳ್ಳಬೇಕೆಂದು ಇತರ ಜಾತಿಗಳಂತೆ ಈ ಎರಡು ಜಾತಿಗಳೂ ಅದೇ ಪ್ರಯತ್ನದಲ್ಲಿ ಬ್ರಾಹ್ಮಣರ ಕೆಲ ಪದ್ಧತಿಗಳನ್ನು ಒಂದೊಮ್ಮೆ ಆಚರಿಸಲು ಪ್ರಯತ್ನಿಸುತ್ತಿದ್ದವು. ಸೋನಾರರು ತಮ್ಮನ್ನು ದೈವಜ್ಞ ಬ್ರಾಹ್ಮಣರೆಂದು ಕರೆದುಕೊಂಡು ಬ್ರಾಹ್ಮಣರಂತೆ ನೆರಿಗೆ ಹಾಕಿ ಧೋತ್ರ ಉಡತೊಡಗಿದರು. ಹಾಗೂ ನಮಸ್ಕಾರ ಎಂದು ಒಬ್ಬರನ್ನೊಬ್ಬರು ಗೌರವಿಸತೊಡಗಿದರು. ನೆರಿಗೆಯ ಧೋತ್ರ ಹಾಗೂ ನಮಸ್ಕಾರವೆಂಬ ಮಾತು ಎರಡೂ ಬ್ರಾಹ್ಮಣರಿಗೆ ವಿಶಿಷ್ಟವಾದವು .
ಸೋನಾರರು ಹೀಗೆ ತಮ್ಮನ್ನು ಅನುಕರಿಸುವುದು ಅಥವಾ ಸರಿಗಟ್ಟುವುದು ಬ್ರಾಹ್ಮಣರಿಗೆ ಸೇರಲಿಲ್ಲ . ಪೇಳ್ವೆಯವರ ಆಡಳಿತದಲ್ಲಿ ಬ್ರಾಹ್ಮಣರೇ ಸೋನಾರರ ಈ ಪ್ರಯತ್ನವನ್ನು ಬಗ್ಗುಬಡಿದುಬಿಟ್ಟರು. ಮುಂಬಯಿಯಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತಾಧಿಕಾರಿಗಳಿಂದ ಕೂಡ ಮುಂಬಯಿ ನಿವಾಸಿಗಳಾದ ಸೋನಾರರಿಗೆ ಅಂತಹದೊಂದು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದರು. ಒಂದು ಕಾಲದಲ್ಲಿ ಪಠರೇ ಪ್ರಭುಗಳ ಜಾತಿಯಲ್ಲಿ ಪುನರ್ವಿವಾಹ ಒಂದು ಸಮ್ಮತ ಸಂಪ್ರದಾಯವಾಗಿತ್ತು. ಬ್ರಾಹ್ಮಣರಲ್ಲಿ ಇದು ಇಲ್ಲವೆಂಬುದನ್ನು ಕಂಡು ಕೆಲವರು ಇದನ್ನು ಕಳಂಕಪ್ರಾಯವೆಂದು ಭಾವಿಸಿದರೆ, ತಮ್ಮ ಜಾತಿಯ ದರ್ಜೆಯನ್ನು ಉತ್ತಮಪಡಿಸಿಕೊಳ್ಳುವ ದೃಷ್ಟಿಯಿಂದ ಪಠಾರೇ ಪ್ರಭುಗಳಲ್ಲಿ ಕೆಲವರು ಪುನರ್ವಿವಾಹ ಪದ್ಧತಿಯನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಪುನರ್ವಿವಾಹಕ್ಕೆ ಪರ ಹಾಗೂ ವಿರೋಧಿಗಳಾದ ಎರಡು ಬಣಗಳುಂಟಾದವು. ಪೇಶ್ನೆಗಳು ಪರಂಪರಾವಾದಿಗಳ ಪಕ್ಷವನ್ನೇ ಎತ್ತಿಹಿಡಿದರು.ಹೀಗೆ ಬ್ರಾಹ್ಮಣರನ್ನು ಅನುಕರಿಸ ಹೊರಟವರನ್ನು ನಿರ್ಬಂಧಿಸಿದರು .
ಮುಸಲ್ಮಾನರು ಖಡ್ಡಬಲದಿಂದ ತಮ್ಮ ಧರ್ಮವನ್ನು ವಿಸ್ತರಿಸಿಕೊಂಡರೆಂದು ಹಿಂದೂಗಳು ಟೀಕಿಸುವುದುಂಟು. ಕ್ರಿಸ್ತಮತವನ್ನು ಅವರು ಹೀಗೆಯೇ ಹಳಿಯುತ್ತಾರೆ. ಮಹಮ್ಮದೀಯರೇ ಆಗಲಿ, ಕ್ರೈಸ್ತರೇ ಆಗಲಿ ಆತ್ರೋದ್ದಾರಕ್ಕೆ ಅವಶ್ಯಕವಾದುದೆಂದು ತಾವು ಯಾವುದನ್ನು ನಂಬಿದ್ದರೋ ಅದನ್ನು ಒಪ್ಪದೇ ಇರುವವರ ಗಂಟಲಲಿ ತುರುಕಿದಾಗ ಹಿಂದೂಗಳು ಏನು ಮಾಡಿದರು? ತಮ್ಮ ಜ್ಞಾನವನ್ನು ಇತರರಿಗೆ ಕೊಡಲೊಪ್ಪಲಿಲ್ಲ, ಇತರರನ್ನು ಅಜ್ಞಾನದಲ್ಲಿಯೇ ಇರಿಸಲು ಪ್ರಯತ್ನಿಸಿದರು. ತಮ್ಮ ಬೌದ್ಧಿಕ ಹಾಗೂ ಸಾಮಾಜಿಕ ಸಂಪತ್ತನ್ನು ಪಡೆಯಲು ಸಿದ್ಧರಾದ ಇತರರೊಡನೆ ಹಂಚಿಕೊಳ್ಳಲು ಒಪ್ಪಲಿಲ್ಲ.ಹೀಗಿರುವಾಗ ಈ ಮೂವರಲ್ಲಿ ನಮಗೆ ಹೆಚ್ಚು ಗೌರವಾಸದರು ಯಾರು ? ಅನುಮಾನವಿಲ್ಲದೆ ನಾನು – ಮಹಮ್ಮದೀಯನು ಕ್ರೂರನಾಗಿದ್ದರೆ, ಹಿಂದೂವು ನೀಚನಾಗಿದ್ದಾನೆ. ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401