ಬಹಿರಂಗ

ಅಸ್ಪೃಶ್ಯತಾಚರಣೆಯ ಕರಾಳ ಕಾನೂನಿನಂದ ತಪ್ಪಿಸಿಕೊಳ್ಳಲು

Published

on

  • ರಘೋತ್ತಮ ಹೊಬ

ಬಾಬಾಸಾಹೇಬ್ ಅಂಬೇಡ್ಕರರ ಪ್ರಕಾರ ಪ್ರಾಚೀನ ಕಾಲದಲ್ಲಿ ಕಾನೂನು ಮತ್ತು ಧರ್ಮ ಎರಡೂ ಕೂಡ ಒಂದೇ ಆಗಿತ್ತು ಮತ್ತು ಈ ಹಿನ್ನೆಲೆಯಲ್ಲಿ ಆ ಕಾಲದಲ್ಲಿ ಜನರ ಸಾಮಾನ್ಯ ನಂಬಿಕೆ ಏನಾಗಿತ್ತೆಂದರೆ ಕಾನೂನು ಬರೆಯುವವನು ದೇವರ ಜೊತೆ ನೇರ ಸಂಪರ್ಕದಲ್ಲಿದ್ದಾನೆ, ದೇವರೇ ಅವನ ಮೂಲಕ ಕಾನೂನುಗಳನ್ನು ನಮಗೆ ಕೊಟ್ಟಿದ್ದಾನೆ ಎಂಬುದಾಗಿತ್ತು. ಆ ಕಾರಣಕ್ಕಾಗಿ ದೇವರು ಕೊಟ್ಟದ್ದು ಎಂಬ ಕಾರಣಕ್ಕಾಗಿ ಮನುಸ್ಮೃತಿ ಕೆಟ್ಟದ್ದು ಎಂದು ಕಂಡುಬಂದರೂ ಕೂಡ ದೇವರ ಭಯಕ್ಕಾಗಿ ಯಾರೂ ಕೂಡ ಅದನ್ನು ವಿರೋಧಿಸಲಿಲ್ಲ. ಹಾಗೆಯೇ ದೇವರ ಕಾರಣಕ್ಕಾಗಿ ಅಥವಾ ದೇವರ ಹೆಸರಲ್ಲಿ ಮನುಸ್ಮೃತಿಯ ಆ ಅಸಮಾನತೆಯ ಕಾನೂನು ಯಾವುದೇ ವಿರೋಧ ಎದುರಿಸದೇ ಸಹಜವಾಗಿ ಜಾರಿಯಾಯಿತು. ಹಾಗೆ ಅದರ ಮೂಲಕ ಮೂಡಿಬಂದ ಅಸ್ಪೃಶ್ಯತೆ ಕೂಡ ಅಷ್ಟೇ ಸಹಜವಾಗಿ ಜಾರಿಯಾಯಿತು (ಆಧಾರ: ಅಂಬೇಡ್ಕರ್ ಬರಹಗಳು ಭಾಷಣಗಳು, ಸಂ.3, ಪು.333).

ಈ ಹಿನ್ನೆಲೆಯಲ್ಲಿ ನಾವು ವೈದಿಕ ಹಬ್ಬಗಳನ್ನು, ಆಚರಣೆಗಳನ್ನು ಆಚರಿಸುತ್ತೇವೆ ಎಂದರೆ ವೈದಿಕ ಕಾನೂನುಗಳನ್ನು, ಅಂಬೇಡ್ಕರ್ ಕಾನೂನಿಗಿಂತ ಮನುಸ್ಮೃತಿಯ ಕಾನೂನುಗಳನ್ನು ಒಪ್ಪುತ್ತೇವೆ ಎಂದರ್ಥ. ಅಂದಹಾಗೆ ಆ ವೈದಿಕ ಕಾನೂನಿನಲ್ಲಿ ಅಸ್ಪೃಶ್ಯತಾಚರಣೆಯೂ ಬರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮತ್ತೊಮ್ಮೆ ಗಮನಿಸಬೇಕು! ಈ ಕಾರಣಕ್ಕಾಗಿ ಅಸ್ಪೃಶ್ಯತಾಚರಣೆಯ ಆ ಕರಾಳ ಕಾನೂನಿನಿಂದ ತಪ್ಪಿಸಿಕೊಳ್ಳಲು ಬಾಬಾಸಾಹೇಬರು ಆ ಧರ್ಮವನ್ನೇ ಬದಲಿಸಿದರು. ಮನುಸ್ಮೃತಿಯ ಕಾನೂನು ಧಿಕ್ಕರಿಸಿ ಬೌದ್ಧ ಧರ್ಮ ಸ್ವೀಕರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version