ದಿನದ ಸುದ್ದಿ
ಡಾ. ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಿಂದ ವಿದ್ಯಾರ್ಥಿ ವೇತನ ಪರೀಕ್ಷೆ
ಸುದ್ದಿದಿನ, ಬೆಂಗಳೂರು : ಡಾ. ರಾಜ್‍ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯು ತನ್ನ ಮೂರನೆಯ ಆವೃತ್ತಿಯ ಸ್ಕಾಲರ್ಶಿಪ್ ಪರೀಕ್ಷೆಯನ್ನು ನಡೆಸಲು ಉತ್ಸುಕವಾಗಿದೆ. ಕರ್ನಾಟಕದ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಉದ್ದೇಶದೊಂದಿಗೆ ಈ ಅಕಾಡೆಮಿಯು ಪ್ರಾರಂಭಗೊಂಡಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ ದಿಶೆಯಲ್ಲಿ ಇದೇ ಮಾರ್ಚ್ 31ರಂದು ಸ್ಕಾಲರ್ಶಿಪ್ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಪರೀಕ್ಷೆಯು ನಮ್ಮಲ್ಲೆರ ಅಚ್ಚುಮೆಚ್ಚಿನ ಡಾ. ರಾಜ್‍ಕುಮಾರ್‍ರವರ ಆಶಯಗಳನ್ನು ಸಾಕಾರಗೊಳಿಸುವ ಒಂದು ಪ್ರಯತ್ನ. ಪ್ರತಿಭಾವಂತ ಹಾಗು ಆರ್ಥಿಕವಾಗಿ ಹಿಂದುಳಿದವರಿಗೋಸ್ಕರ ಈ ಪರೀಕ್ಷೆಯನ್ನು ಏರ್ಪಡಿಸಲಾಗಿದೆ. ಆದ್ದರಿಂದ ಕರ್ನನಾಟಕ ರಾಜ್ಯದ ಆಕಾಂಕ್ಷಿಗಳು ಇದರ ಸದುಪಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.
ಅರ್ಹತೆ
ಪದವಿ ಪೂರೈಸಿರುವ ಹಾಗು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.
ಸ್ಕಾಲರ್ಶಿಪ್ ಪರೀಕ್ಷೆಯ ಪಠ್ಯಕ್ರಮ
ಸ್ಕಾಲರ್ಶಿಪ್ ಪರೀಕ್ಷೆ ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಪತ್ರಿಕೆ ವಸ್ತು ನಿಷ್ಠ ಮಾದರಿಯಲ್ಲಿ ಇರುತ್ತದೆ.
- ಪರೀಕ್ಷೆಯ ಅವಧಿ – 2 ಘಂಟೆಗಳು.
- ಪ್ರಶ್ನೆಗಳ ಸಂಖ್ಯೆ- 100
- ಪ್ರತಿ ಪ್ರಶ್ನೆಗೆ ಅಂಕಗಳು – 2
- ಒಟ್ಟು ಅಂಕಗಳು – 200
- ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಇರುತ್ತವೆ.
ಪಠ್ಯಕ್ರಮ
- ಪ್ರಚಲಿತ ವಿದ್ಯಮಾನಗಳು, ಭಾರತೀಯ ಇತಿಹಾಸ, ಭೂಗೋಳ ಶಾಸ್ತ್ರ, ಭಾರತದ ರಾಜಕೀಯ ಮತ್ತು ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ಮಾನಸಿಕ ಸಾಮಥ್ಯ೯(10ನೆ ತರಗತಿ ಮಟ್ಟ).
- ಸೂಚನೆ- ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಆ ಪ್ರಶ್ನೆಗೆ ಮೀಸಲಾದ ಅಂಕಗಳಲ್ಲಿ (1/4) ರಷ್ಟು ಅಂಕಗಳನ್ನು ಕಳೆಯಲಾಗುವುದು.
- ನಿಮ್ಮ ಪ್ರವೇಶ ಪತ್ರದಲ್ಲಿ ಪರೀಕ್ಷೆ ನಡೆಯುವ ಸ್ಥಳ ಮತ್ತು ಸಮಯವನ್ನು ತಿಳಿಸಲಾಗುವುದು ಮತ್ತು ಪ್ರವೇಶ ಪತ್ರವನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.
ನೋಂದಾಯಿಸಿಕೊಳ್ಳಲು ಈ ಜಾಲ ತಾಣಕ್ಕೆ ಭೇಟಿ ನೀಡಿ. ಲಿಂಕ್ ಮೇಲೆ ಕ್ಲಿಕ್ ಮಾಡಿ
http://www.drrajkumaracademy.com/
ಸುದ್ದಿದಿನ.ಕಾಂ|ವಾಟ್ಸಾಪ್|9986715401