ಸಿನಿ ಸುದ್ದಿ
ಅಣ್ಣಾವ್ರ ಮೊಮ್ಮಗನ ಅದ್ದೂರಿ ನಿಶ್ಚಿತಾರ್ಥ
ಸುದ್ದಿದಿನ ಡೆಸ್ಕ್ : ಡಾ.ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ ಅವರ ನಿಶ್ಚಿತಾರ್ಥವು ಇಂದು ಸಾಂಸ್ಕೃತಿಕ ನಗರಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರರಾದ ಯುವರಾಜ್ ಕುಮಾರ್ ತನ್ನ ಬಹುಕಾಲದ ಗೆಳತಿ ಶ್ರೀದೇವಿ ಭೈರಪ್ಪ ಅವರಿಗೆ ಉಂಗುರ ತೊಡಿಸುವುದರ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ ಕುಟುಂಬದ ಆಪ್ತರು, ಸಂಬಂಧಿಗಳು ಭಾಗವಹಿಸಿದ್ದರು. ರೆಬೆಲ್ ಸ್ಟಾರ್ ಅಂಬರೀಶ್, ಶ್ರೀಮುರಳಿ ಸೇರಿದಂತೆ, ಶಿವಣ್ಣ ಅಪ್ಪು ಇನ್ನಿತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401