/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ತರಳಬಾಳು ಶ್ರೀ ಪರಂಪರೆಯ ಸಮಾಜಮುಖಿ ಕೈಂಕರ್ಯ ನಿತ್ಯ ಸ್ಮರಣೀಯ : ಎಸ್. ರುದ್ರೇಗೌಡ್ರ ಅಭಿಮತ

Published

on

ರಾಷ್ಟ್ರೀಯ ನಾಟಕೋತ್ಸವ ಸಾಣೇಹಳ್ಳಿ

ಸುದ್ದಿದಿನ ಡೆಸ್ಕ್ : ನಿತ್ಯವೂ ಸಮಾಜಮುಖಿಯಾಗಿ ವೈಚಾರಿಕ, ಸಾಂಸ್ಕೃತಿಕ, ಸಾಹಿತ್ಯಕವಾಗಿ ಚಿಂತಿಸುವ ಅಪರೂಪದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನ ನಾಡಿಗೆ ಅತ್ಯಗತ್ಯವಾಗಿದೆ ಎಂದು ಮಾನ್ಯ ವಿಧಾನ ಪರಿಷತ್ ಶಾಸಕರಾದ ಎಸ್. ರುದ್ರೇಗೌಡ್ರು ಅಭಿಪ್ರಾಯ ಪಟ್ಟರು.

ಸಾಣೇಹಳ್ಳಿಯಲ್ಲಿ ಜರುಗುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಇಂದಿನ ಸುಂದರ ಸಂಜೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀಯುತರು ಸಮಾಜದ ಅಭ್ಯುಧಯಕ್ಕೆ ತರಳಬಾಳು ಬೃಹನ್ಮಠದ ಕೊಡುಗೆ ಸ್ಮರಣೀಯ ಎಂದು ತಿಳಿಸಿದರು.

ಸಾಮಾಜಿಕ ಮಾಧ್ಯಮಗಳು,
ಟಿ ವಿ ಮಾಧ್ಯಮಗಳು ಮನುಷ್ಯನ ಮನಸ್ಸುನ್ನು ವಿಕೃತಗೊಳಿಸುತ್ತಿರುವ ಸಂಧರ್ಭದಲ್ಲಿ ರಂಗಭೂಮಿಯ ಮೂಲಕ ಶರಣರ ಆದರ್ಶಗಳನ್ನು ವಿಶ್ವವ್ಯಾಪಿಯಾಗಿ ಪ್ರಚುರಪಡಿಸುತ್ತಿರುವ ಶ್ರೀಗಳು ನಿಜಾರ್ಥದ ರಂಗಜಂಗಮರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಮ ಪೂಜನೀಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಚಿಕ್ಕಮಗಳೂರು ಬಸವ ಮಂದಿರದ ಶ್ರೀ ಮ ನಿ ಪ್ರ ಜಯಬಸವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಾದಿಸಿದರು.

ರಾಜ್ಯ ಸರ್ಕಾರದ ಸಚಿವರಾದ ಶ್ರೀ ಶಿವಶಂಕರ ರೆಡ್ಡಿ, ಶಿಗ್ಗಾವಿ ಶಾಸಕರಾದ ಬಸವರಾಜ ಬೊಮ್ಮಾಯಿ, ಧಾರವಾಡದ ಶಾಸಕರಾದ ಅಮೃತ್ ದೇಸಾಯಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಮತಿ ತೇಜಸ್ವಿನಿ ಗೌಡ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಪ್ರಬುದ್ಧ ಶಿಸ್ತಿನ ವೀಕ್ಷಣೆ ಗಮನ ಸೆಳೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version