ದಿನದ ಸುದ್ದಿ

ರೆಡ್‌ಬಸ್‌ನಿಂದ ವರ್ಷಾಂತ್ಯದ ಅಭಿಯಾನಕ್ಕೆ ಚಾಲನೆ; ಅದೃಷ್ಟವಂತ ಗ್ರಾಹಕರು ಒಂದು ಗ್ರಾಂ ಚಿನ್ನ ಗೆಲ್ಲುವ ಅವಕಾಶ

Published

on

  • ವರ್ಷಾಂತ್ಯದ ಈ ಅಭಿಯಾನವು ಒಂದು ಗ್ರಾಂ ಚಿನ್ನ ಗೆಲ್ಲುವ ಅವಕಾಶ ನೀಡಿದೆ.
  • ಚಿನ್ನದ ವಿಜೇತರನ್ನು ಪ್ರತಿನಿತ್ಯ ಪ್ರಕಟಿಸಲಾಗುತ್ತದೆ; ಎಲ್ಲ ಗ್ರಾಹಕರು 50 ರೂ. ನಿಶ್ಚಿತ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.

ಸುದ್ದಿದಿನ,ಬೆಂಗಳೂರು: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಭಾರತದ ಅತ್ಯಂತ ದೊಡ್ಡ ಆನ್‌ಲೈನ್ ಬಸ್ ಟಿಕೆಟಿಂಗ್ ಪ್ಲಾಟ್‌ಫಾರಂ ರೆಡ್‌ಬಸ್ ತನ್ನ ವರ್ಷಾಂತ್ಯದ ಅಭಿಯಾನವನ್ನು ವಿಶೇಷ ಕೊಡುಗೆಯೊಂದಿಗೆ ಪ್ರಕಟಿಸಿದ್ದು ಇದು ಡಿಸೆಂಬರ್ 20 ರಿಂದ ಜನವರಿ 16,2022ರವರೆಗೆ ಅವರ ಟಿಕೆಟ್‌ಗಳನ್ನು ಬುಕ್ ಮಾಡುವ ಅದೃಷ್ಟವಂತ ಗ್ರಾಹಕರಿಗೆ ಒಂದು ಗ್ರಾಮ್ ಚಿನ್ನ ಗೆಲ್ಲುವ ಅವಕಾಶ ಕಲ್ಪಿಸಿದೆ.

ಈ ಗೋಲ್ಡನ್ ಟಿಕೆಟ್ ಆಫರ್ ಅನ್ನು ಕರ್ನಾಟಕದಲ್ಲಿ ರೆಡ್‌ಬಸ್ ಪ್ಲಾಟ್‌ಫಾರಂನಲ್ಲಿ ಅವರ ಸೀಟುಗಳನ್ನು ಖಾಸಗಿ ಬಸ್‌ಗಳಲ್ಲಿ ಬುಕ್ ಮಾಡುವವರಿಗೆ ನೀಡಲಾಗುತ್ತಿದೆ. ಈ 28 ದಿನಗಳ ಅವಧಿಯಲ್ಲಿ ರೆಡ್‌ಬಸ್‌ನಲ್ಲಿ ಖಾಸಗಿ ಬಸ್ ಆಪರೇಟರ್‌ಗಳೊಂದಿಗೆ ಟಿಕೆಟ್ ಬುಕ್ ಮಾಡುವ ಎಲ್ಲ ಗ್ರಾಹಕರು ಒಂದು ಗ್ರಾಂ ಚಿನ್ನ ಗೆಲ್ಲುವ ಅವಕಾಶ ಪಡೆಯುತ್ತಾರೆ.

ಇದಲ್ಲದೆ ಪ್ರತಿ ಪ್ರಯಾಣಿಕರೂ ಈ ಅವಧಿಯಲ್ಲಿ ಅವರ ರೆಡ್‌ಬಸ್ ವ್ಯಾಲೆಟ್‌ಗಳಲ್ಲಿ 50ರೂ. ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಕೊಡುಗೆ ಪಡೆಯಲು ಪ್ರಯಾಣಿಕರು ಅವರ ಬಸ್ ಟಿಕೆಟ್‌ಗಳನ್ನು ರೆಡ್‌ಬಸ್‌ನಲ್ಲಿ ಕಾಯ್ದಿರಿಸುವಾಗ `ಗೋಲ್ಡನ್ ಟಿಕೆಟ್’ ಆಫರ್ ಕೋಡ್ ಅನ್ನು ನಮೂದಿಸಬೇಕು.

ಈ ಅಭಿಯಾನ ಪ್ರಾರಂಭ ಕುರಿತು ರೆಡ್‌ಬಸ್‌ನ ಎಸ್.ವಿ.ಪಿ ಮತ್ತು ಹೆಡ್ ಆಫ್ ಮಾರ್ಕೆಟಿಂಗ್ ಪಲ್ಲವಿ ಛೋಪ್ರಾ, “ವರ್ಷಾಂತ್ಯ ಮತ್ತು ಹೊಸ ವರ್ಷದ ಪ್ರಾರಂಭವು ಪ್ರಯಾಣಿಕರು ಹಾಗೂ ಬಸ್ ಆಪರೇಟರ್‌ಗಳಿಗೆ ಅತ್ಯಂತ ನಿರೀಕ್ಷೆಯ ಅವಧಿಗಳಲ್ಲಿ ಒಂದಾಗಿವೆ.

ಹಬ್ಬದ ಋತುವಿನ ಆರಂಭದಿಂದ ಪ್ರಯಾಣವು ಕ್ರಮೇಣ ಸ್ಥಿರವಾಗಿ ಹೆಚ್ಚಳ ಕಾಣುತ್ತಿದೆ ಮತ್ತು ನಮ್ಮ ಗೋಲ್ಡನ್ ಟಿಕೆಟ್ ಕೊಡುಗೆಯ ಅಭಿಯಾನವು ವಿಶ್ವಾಸ ಮೂಡಿಸುವಲ್ಲಿ ಮತ್ತು ಪ್ರಯಾಣಿಕರನ್ನು ಅತ್ಯಂತ ಅಗತ್ಯವಾದ ವರ್ಷಾಂತ್ಯದ ಬ್ರೇಕ್ ಪಡೆಯುವಲ್ಲಿ ಬಹಳ ದೂರ ಸಾಗಲಿದೆ.

ಅದೃಷ್ಟವಂತ ಗ್ರಾಹಕರಿಗೆ 28 ದಿನಗಳ ಕಾಲ ಪ್ರತಿದಿನವೂ ಒಂದು ಗ್ರಾಂ ಚಿನ್ನವನ್ನು ನೀಡುವ ಮೂಲಕ ಸ್ಮರಣೀಯ ಸಂದರ್ಭವಾಗಿಸಲಿದೆ. ನಾವು ನಮ್ಮ ಗ್ರಾಹಕರಿಗೆ ಅತ್ಯಂತ ಸಂತೋಷದ ಮತ್ತು ಸುರಕ್ಷಿತ ರಜಾದಿನಗಳು ಮತ್ತು ಮಹತ್ತರ ವರ್ಷವನ್ನು ಹಾರೈಸುತ್ತೇವೆ” ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version