ದಿನದ ಸುದ್ದಿ

ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಹಾಕಿ ಅತ್ಯಾಚಾರ : ಸಾಗರ ಸಿಪಿಐ ಅಶೋಕ್ ಕುಮಾರ್ ವಿರುದ್ಧ ದೂರು ದಾಖಲು

Published

on

ಸುದ್ದಿದಿನ,ಶಿವಮೊಗ್ಗ: ನಾಲ್ಕು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂಬ ಸಂತ್ರಸ್ತೆ ದೂರಿನನ್ವಯಸಾಗರ ಪೊಲೀಸ್ ಠಾಣೆಯ ಸಿಪಿಐ ಅಶೋಕ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಪ್ರಕರಣವೊಂದಕ್ಕೆ ದೂರು ಸಲ್ಲಿಸಲು ಮಹಿಳೆ ಸಾಗರ ಪೊಲೀಸ್ ಠಾಣೆಗೆ ಬಂದಿದ್ದಾಗ ಸಿಪಿಐ ಮಹಿಳೆಯ ಫೋನ್ ನಂಬರ್ ಪಡೆದು ಪರಿಚಯ ಮಾಡಿಕೊಂಡು ಸಲುಗೆ ಬಳಸಿಕೊಂಡಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಎಸಗಿ, ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನ ಮಾಡಿಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದು, ಬೆದರಿಸಿ ತಾನು ಹೇಳಿರುವ ಸ್ಥಳಕ್ಕೆ ಕರಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಪೊಲೀಸರಿಗೆ ದೂರು ನೀಡಿದ್ದಕ್ಕೆ ಕೊಲೆ ಬೆದರಿಕೆ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದು, ಸದ್ಯ ಸಿಪಿಐ ಅಶೋಕ್ ವಿರುದ್ಧ ಐಪಿಸಿ ಕಲಂ 354(ಎ), 376 (ಸಿ), 417, 504, 506ರ ಅಡಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version