ದಿನದ ಸುದ್ದಿ
ಡ್ರಗ್ಸ್ ಜಾಲದಲ್ಲಿ ಮತ್ತೋರ್ವ ನಟಿ..!
ಸುದ್ದಿದಿನ, ಬೆಂಗಳೂರು:ನಟಿಯೊಬ್ಬರು ಕನ್ನಡದಲ್ಲಿ ಒಂದು ಸಿನಿಮಾ ಮಾಡಿ, ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಡ್ರಗ್ಸ್ ತೆಗೆದುಕೊಂಡಿದ್ದರು. ಈ ಚಿತ್ರಕ್ಕೆ ಆಕೆಗೆ ಪ್ರಶಸ್ತಿಯೂ ಬಂದಿತ್ತು ಎಂಬ ಮಾಹಿತಿಯನ್ನು ಎನ್ ಸಿಬಿ ಪತ್ತೆಹಚ್ಚಿದೆ. ಕನ್ನಡದ ಈ ಚಿತ್ರದಲ್ಲಿ ನಟಿಯೊಂದಿಗೆ ನಟಿಸುತ್ತಿದ್ದ ನಟ ಕೂಡ ಡ್ರಗ್ಸ್ ಜಾಲಕ್ಕೆ ಬಿದ್ದಿದ್ದ. ಆತನ ಸಹವಾಸದಿಂದ ನಟಿಯೂ ಡ್ರಗ್ಸ್ ಸೇವಿಸಿದ್ದಳು. ಆಕೆ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಸದ್ಯ ನೆರೆಹೊರೆಯ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದಾರೆ ಎಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243