ದಿನದ ಸುದ್ದಿ

ಡ್ರಗ್ಸ್ ಮಾಫಿಯಾ | ಮತ್ತೊಬ್ಬ ನಟಿ ಬಂಧನ ಸಾಧ್ಯತೆ..!

Published

on

ಸುದ್ದಿದಿನ, ಬೆಂಗಳೂರು:ಡ್ರಗ್ಸ್ ದಂಧೆಯಲ್ಲಿ ಮತ್ತೊಬ್ಬ ನಟಿಯೂ ಸಹ ಭಾಗಿಯಾಗಿದ್ದಾರೆಂಬ ಮಾಹಿತಿಯೊಂದು ಹೊರ ಬಿದ್ದಿದೆ. ಈ ಹಿಂದೆ ನಟಿಯರಾದ ಸಂಜನಾ ಮತ್ತು ರಾಗಿಣಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟಿದ್ದಾರೆ. ಈ ನಟಿ ಡ್ರಗ್ಸ್ ನಶೆಯಲ್ಲಿ ಮುಳುಗುವ ಜೊತೆಗೆ ಹಲವು ಕಲಾವಿದರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಳು.

ಈಗ ದೊರೆತಿರುವ ಮಾಹಿತ ಪ್ರಕಾರ ಈ ನಟಿ ಕೆಲವು ಜಾಹೀರಾತು‌, ಸಿನೆಮಾ, ಆಲ್ಬಮ್‌ ಹಾಡುಗಳಲ್ಲಿ‌ ನಟಿಸಿದ್ದಾರೆ. ಈಕೆ ಹಲವು ರೇವ್ ಪಾರ್ಟಿಗಳಲ್ಲಿ‌ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಎನ್ ಸಿ ಬಿ ಪೋಲೀಸರು ‌ಈ‌ನಟಿಯ ಚಲನವಲನಗಳ ಮೇಲೆ ಕಣ್ಣಿದ್ದು, ಯಾವ ಸಮಯದಲ್ಲಾದರೂ ಬಂಧಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version