ದಿನದ ಸುದ್ದಿ
ಡ್ರಗ್ಸ್ ಮಾರಾಟ ಜಾಲದ ರೂವಾರಿ ಬಂಧನ
ಸುದ್ದಿದಿನ, ಬೆಂಗಳೂರು | ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶ ಹಿನ್ನೆಲೆ ಗೂಂಡಾ ಕಾಯ್ದೆಯಡಿ ಡ್ರಗ್ಸ್ ಮಾರಾಟ ಜಾಲದ ರೂವಾರಿಯನ್ನ ಬಂಧಿಸಲಾಗಿದೆ.
ಕಳೆದ ಕೆಲದಿನಗಳಿಂದ ಡ್ರಗ್ಸ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಗಿಳಿದಿದ್ದ ನಗರ ಪೊಲೀಸರು. “ಆಂಟಿ ಡ್ರಗ್ಸ್ ಅಭಿಯಾನ” ದಡಿಯಲ್ಲಿ ಕಾರ್ಯಾಚರಣೆ ನಡೆಸಿ,
ಡ್ರಗ್ಸ್ ಮಾರಾಟ ಮಾಡುತ್ತಿದ್ದ ಏಜೆಂಟ್ ನವೀನ್(29) ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತನಿಂದ ಈ ಹಿಂದೆ ಒಂದೇ ಪ್ರಕರಣದಲ್ಲಿ 40ಕೆಜಿ ಗಾಂಜಾ ಜಪ್ತಿ ಮಾಡಿಲಾಗಿತ್ತು. ಕುಖ್ಯಾತ ನವೀನ್ ವಿರುದ್ಧ ಕೋರಮಂಗಲ ಸೇರಿ ವಿವಿಧ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು.
ಸುದ್ದಿದಿನ.ಕಾಂ|ವಾಟ್ಸಾಪ್|9986715401