ದಿನದ ಸುದ್ದಿ
‘ದಕ್ಷಿಣ ಏಷಿಯಾ ಸಾಹಿತ್ಯ ಪ್ರಶಸ್ತಿ’ ಪಡೆದ ಸಾಹಿತಿ ಜಯಂತ್ ಕಾಯ್ಕಿಣಿ..!
ಸುದ್ದಿದಿನ ಡೆಸ್ಕ್ : ಜಯಂತ್ ಕಾಯ್ಕಿಣಿ ಹದಿನಾರು ಕತೆಗಳ ‘ನೋ ಪ್ರೆಸೆಂಟ್ ಪ್ಲೀಸ್’ ಸಂಕಲನಕ್ಕೆ ಬಹುದೊಡ್ಡ ಮಾನ್ಯತೆ ದೊರೆತಿದ್ದು, ದಕ್ಷಿಣ ಏಷಿಯಾದ ಸಾಹಿತ್ಯದ ಅನುವಾದಕ್ಕೆ ಕೊಡಮಾಡುವ DSC ಪ್ರಶಸ್ತಿ ಲಭಿಸಿದೆ.
ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಈ ಪ್ರಶಸ್ತಿಯ ಮೊತ್ತ 25000 ಡಾಲರ್ ಆಗಿದ್ದು, ಹಲವು ಭಾಷೆಗಳ ಅನುವಾದಿತ ಕೃತಿಗಳನ್ನು ಹಿಂದಕ್ಕೆ ಹಾಕಿ ಜಯಂತ್ ಕೃತಿ ಈ ಪ್ರಶಸ್ತಿ ಗೆದ್ದಿದೆ. ಹಲವು ದಶಕಗಳಿಂದ ಅಪ್ಪಟ ಸಾಹಿತ್ಯದ ಆರಾಧಕರಾಗಿದ್ದ ಜಯಂತ್ ಕಾಯ್ಕಿಣಿ ಅವರಿಗೆ ಅರ್ಹ ಮನ್ನಣೆ ದೊರೆತಂತಾಗಿದೆ. ತೇಜಸ್ವಿನಿ ನಿರಂಜನ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401