ಸಿನಿ ಸುದ್ದಿ
ನಟ ದುನಿಯಾ ವಿಜಯ್ ಗೆ ತೀರದ ಸಂಕಷ್ಟ : ನೋಟಿಸ್ ಜಾರಿ
ಸುದ್ದಿದಿನ ಡೆಸ್ಕ್ : ನಟ ದುನಿಯಾ ವಿಜಯ್ ವಿಚಾರಣೆಗೆ ಹಾಜರಾಗುವಂತೆ ಪೋಲಿಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ. ಶಾಂತಿ, ಕಾನೂನು ಸುವ್ಯವಸ್ಥೆ ಹದಗಡೆಸಿದ ಆರೋಪದ ಮೇಲೆ crpc 107 ಹಾಕಲಾಗಿತ್ತು ಈ ಹಿನ್ನೆಲೆಯಲ್ಲಿ ಸೆಕ್ಷನ್ ಹಾಕಿ ವಾರ ಕಳೆದರು ಬಂದು ಮುಚ್ಚಳಿಕೆ ಬರೆದುಕೊಡದ ದುನಿಯಾ ವಿಜಯ್ ಗೆ ಪೊಲೀಸರು ನೋಟೀಸ್ ನೀಡಿದ್ದಾರೆ.
ದುನಿಯಾ ವಿಜಯ್ ಕುಟುಂಬದವರು ಪದೇ ಪದೇ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುತ್ತಿದ್ದಾರೆ,
ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ದುನಿಯಾ ವಿಜಿ ಹಾಗೂ ನಾಗರತ್ನ ಎರಡು ಕಡೆಯವರ ಮೇಲೆ 107 ಸೆಕ್ಷನ್ ಹಾಕಲಾಗಿತ್ತು.ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.ಸ್ಥಳೀಯ ಡಿಸಿಪಿ ನೇತೃತ್ವದಲ್ಲಿ ನಡೆಯಲಿರುವ ವಿಚಾರಣೆಗೆ ಸೋಮವಾರ ದಕ್ಷಿಣ ವಿಭಾಗ ಡಿಸಿಪಿ ಆಣ್ಣಾಮಲೈ ಮುಂದೆ ಹಾಜರಾಗಲಿದ್ದಾರೆ ನಟ ದುನಿಯಾ ವಿಜಯ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401