ಸಿನಿ ಸುದ್ದಿ

ದುನಿಯಾ ವಿಜಿ ‘ಖೈದಿ ನಂಬರ್ 9035’..!: ಈ ದಿನದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ಓದಿ

Published

on

ಸುದ್ದಿದಿನ, ಬೆಂಗಳೂರು : ಪರಪ್ಪನ ಆಗ್ರಹಾರ ಜೈಲಿನಲ್ಲಿ ದುನಿಯಾ ವಿಜಿಗೆ ನಂಬರ್ ಖೈದಿ ನಂಬರ್ ಕೊಡಲಾಗಿದೆ. ಜೈಲು ಅಧಿಕಾರಿಗಳಿಂದ ವಿಜಿಗೆ ವಿಚಾರಣಾಧೀನ ಖೈದಿ ಸಂಖ್ಯೆ ಮಂಜೂರು ಮಾಡಿದ್ದಾರೆ. ದುನಿಯಾ ವಿಜಿಗೆ 9035, ಪ್ರಸಾದ್ 9036, ಮಣಿ 9037, ಪ್ರಸಾದ್ 9038. ನಾಲ್ವರು ಆರೋಪಿಗಳಿಗೆ UTP (ಯು.ಟಿ.ಪಿ : ಅಂಡರ್ ಟ್ರಯಲ್ ಪ್ರಿಸನರ್) ಸಂಖ್ಯೆ ನೀಡಿದ ಜೈಲು ಆಧಿಕಾರಿಗಳು.

ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ದುನಿಯಾ ವಿಜಯ್ ಕೋರ್ಟ್ ಮೊರೆ ಹೋಗುದ್ದಾರೆ. 8ನೇ ACMM ಕೋರ್ಟ್ಗೆ ಜಾಮೀನು ಕೋರಿ ಅರ್ಜಿ‌ಸಲ್ಲಿಸಿದ್ದಾರೆ. A1 ಪ್ರಸಾದ್, A2 ದುನಿಯಾ ವಿಜಯ್, A3 ಮಣಿ ಇಂದ ಅರ್ಜಿ ಸಲ್ಲಿಸಲಾಗಿದ್ದು, ಮೂವರು ಆರೋಪಿಗಳ ಪರ ವಕೀಲ ಶಿವಕುಮಾರ್ ವಕಾಲತ್ತು ನಡೆಸಲಿದ್ದಾರೆ. ನ್ಯಾ.ಮಹೇಶ್ ಬಾಬು ರಿಂದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದಾರೆ‌. ವಿಚಾರಣೆಗೆ ಬಂದ 3 ಆರೋಪಿಗಳಿಗೆ ಜಾಮೀನು ಅರ್ಜಿ
ನೀಡದಂತೆ ವಾದ ಮಂಡಿಸಲಾಯ್ತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಿರುವ ಸರ್ಕಾರಿ ಅಭಿಯೋಜಕರು.

ದುನಿಯಾ ವಿಜಯ್ ಪತ್ನಿಯರ ಬಡಿದಾಟ ಪ್ರಕರಣ

ಇಬ್ಬರು ಪತ್ನಿಯರ ಹೇಳಿಕೆ ದಾಖಲಿಸಿರುವ ಪೊಲೀಸರು, ಕೀರ್ತಿ ಮನೆಯಲ್ಲಿ ನೆನ್ನೆ ನಡೆದಿದ್ದ ಪತ್ನಿಯರಿಬ್ಬರ ಬಡಿದಾಟ, ಪರಸ್ಪರ ತಳ್ಳಾಡಿ, ಬಡಿದಾಡಿಕೊಂಡು,ಕೈ ಗಳಿಂದ ಹಲ್ಲೆ ಮಾಡಿಕೊಂಡು ಜಗಳ. ದುನಿಯಾ ವಿಜಯ್ ತಂದೆ-ತಾಯಿ ಇಬ್ಬರಿಂದಲೂ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು. ಕೀರ್ತಿ ಮತ್ತು ನಾಗರತ್ನ ಗಲಾಟೆಗೆ ಕಾರಣವೇನು ಎಂಬ ಅಂಶಗಳ ಕುರಿತ ಪೊಲೀಸರಿಗೆ ವಿವರಣೆ ಪಡೆಯಲಾಗಿದೆ. ಘಟನೆ ಸಂಪೂರ್ಣ ಚಿತ್ರಣ ಪೊಲೀಸರಿಗೆ ವಿವರಿಸಿರುವ ವಿಜಯ್ ಪೋಷಕರು. ವಿಜಯ್ ಮಕ್ಕಳ ಹೇಳಿಕೆ ದಾಖಲಿಸಲು ಪೊಲೀಸರ ನಿರ್ಧಾರ ಮಾಡಿದ್ದಾರೆ.
ಘಟನೆ ನಡೆದ ವೇಳೆ ಮನೆಯಲ್ಲಿ ಪ್ರತ್ಯಕ್ಷ ದರ್ಶಿಗಳಾಗಿದ್ದ ಮೂವರು ಮಕ್ಕಳ ಹೇಳಿಕೆಯನ್ನು ಸಂಜೆ ದಾಖಲಿಸಲು ನಿರ್ಧರಿಸಿರುವ ಗಿರಿನಗರ ಪೊಲೀಸರು.

ಪರಂ ಮೊರೆ ಹೋದ ಪಾನಿಪೂರಿ‌ಕಿಟ್ಟಿ

ಗೃಹಸಚಿವ ಜಿ. ಪರಮೇಶ್ವರ್ ಮೊರೆ ಹೋದ ಪಾನಿಪುರಿ ಕಿಟ್ಟಿಯು ದುನಿಯಾ ವಿಜಿ ಪ್ರಕರಣವನ್ನು ಸರ್ಕಾರಿ ವಿಶೇಷ ಅಭಿಯೋಜ ಕಾರಗಿ ಶ್ಯಾಂಮ್ ಸುಂದರ್ ಅವರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ. ಶ್ಯಾಂಮ್ ಸುಂದರ್ ವಿದ್ವತ್ ಪ್ರಕರಣವನ್ನು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡಿದ್ರು,ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಂಡಿದ್ರು, ಹೀಗಾಗಿ ಅವರನ್ನೆ ನೇಮಕ ಮಾಡಬೇಕೆಂದು ಗೃಹಸಚಿವರ ಬಳಿ ಮನವಿ ಮಾಡಿದ್ದಾರೆ ಕಿಟ್ಟಿ.

ವಿಜಿ ಪತ್ನಿ ನಾಗರತ್ನ ಹೀಗಂದ್ರು

ಪಾನಿಪುರಿ ಕಿಟ್ಟಿ ಒಳ್ಳೆ ಮನುಷ್ಯ. ವಿಜಯ್ ಜೊತೆ ತುಂಬಾ ಚೆನ್ನಾಗೆ ಇದ್ರು. ಪಾನಿಪುರಿ ಕಿಟ್ಟಿ ಅವರ ಮನೆಯಿಂದ ಊಟ ತಂದು ವಿಜಯ್ ಗೆ ಕೊಟ್ತೀದ್ರು. ನನ್ನ ಗಂಡನ ಜೊತೆ ತುಂಬಾ ಚೆನ್ನಾಗಿದ್ರು. ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಯಾಕೆ ಗಲಾಟೆ ಆಯಿತು ಅನ್ನೋದು ಗೊತ್ತಿಲ್ಲ ವಿಜಿ ಪತ್ನಿ ನಾಗರತ್ನ ಹೇಳಿಕೆ ನೀಡಿದ್ದಾರೆ. ದುನಿಯಾ ವಿಜಯ್ ತಂದೆ ಅವರೇ ನನ್ನ ಬಗ್ಗೆ ತಪ್ಪು ಮಾಹಿತಿ ನೀಡ್ತೀದ್ದಾರೆ. ನಾಗರತ್ನಗೆ ಆಸ್ತಿ ಕೊಟ್ಟಿದೇವೆ ಅಂತಾ ಹೇಳಿಕೊಂಡು ಓಡಾಡ್ತೀದ್ದಾರೆ. ಅವರೇ ಹಾದಿ ತಪ್ಪಿಸುತ್ತಿದ್ದಾರೆ‌ ಎಂದಿದ್ದಾರೆ. ವಿಜಿ ಎರಡನೇ ಹೆಂಡ್ತಿ ಮೇಲೆ ದೂರು ನೀಡಿದ್ದ ನಾಗರತ್ನ . ನಿನ್ನೆ ದುನಿಯಾ ವಿಜಯ್ ಗಲಾಟೆ ವಿಚಾರ ಟಿವಿಯಲ್ಲಿ ನೋಡ್ದೆ. ಮಗಾ ಸಾಮ್ರಾಟ್ ಕೂಡಾ ವಿಜಯ್ ಜೊತೆ ಇದ್ರು ಅಂತಾ ನೋಡ್ದೆ. ಅದ್ಕೆ ಗಾಬರಿಯಾಗಿ ಕೀರ್ತಿ ಗೌಡ ಮನೆಗೆ ಹೋದೆ.‌ಯಾಕೆ ನನ್ನ ಮಗನನ್ನ ಅಷ್ಟೋತ್ತಿಗೆ ಕಳುಹಿಸಿದ್ರೆ ಅಂತಾ ಕೇಳ್ದೆ. ಆಗ ನಮ್ಮ ಮಾವಾ,ಅತ್ತೆ ಕೀರ್ತಿ ಗೌಡಗೆ ಸರ್ಫೋರ್ಟ್ ಮಾಡಿದ್ರು. ನಂತ್ರ ಮಾತಿಗೆ ಮಾತು ಬೆಳೆದು ಗಲಾಟೆ ಆಯಿತು, ಹೊಡೆದಾಟ ಆಯಿತು. ನಂತ್ರ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಟ್ಟೆ.

ದುನಿಯಾ ವಿಜಯ್ ಗೆ ಬುದ್ಧಿ ಹೇಳೋರು ಯಾರು ಇಲ್ಲ

ಕಳೆದ ಎರಡು ವರ್ಷದಿಂದ ವಿಜಿ ಜೈಲು,ಪೊಲೀಸ್ ಠಾಣೆಗೆ ಹೋಗ್ತಾನೆ ಇದ್ದಾರೆ. ನಾನ್ ಬುದ್ಧಿ ಹೇಳೋಕೆ ಹೋದೆ ನನ್ನನ್ನ ದೂರ ಮಾಡಿದ್ರು. ಈಗ ಅವರು ದುಡ್ಡಿಗಾಗಿ ಬಂದವಳ ಜೊತೆ ಇದ್ದಾರೆ. ಅವ್ಳು ಸ್ವಲ್ಪ ದಿನ ಇರ್ತಾಳೆ ಆಮೇಲೆ ಹೋಗ್ತಾಳೆ. ಅವ್ರೆಲ್ಲ ದುಡ್ಡಿಗೆ ಬರೋರು. ಈಗ ಇವ್ರು ಜೈಲಿಗೆ ಹೋಗಿದ್ದಾರೆ, ನನ್ನ ಮಕ್ಕಳ ಗತಿ ಏನು. ಕೀರ್ತಿ ಗೌಡದು ದಾರಿದ್ರ ಕಾಲು.‌ಅವಳು ಕಾಲು ಇಟ್ಟಿದೆ ತಡ ವಿಜಯ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ನಾನ್ ಇದಿದ್ರೆ ಸುಮ್ಮನೆ ಇರ್ತಿದ್ನಾ..? ಈಗ ವಿಜಯ್ ಜೈಲಿಗೆ ಹೋಗೋಕ್ಕೆ ಕೀರ್ತಿ ಗೌಡನೇ ಕಾರಣ.

ಪಾನಿಪುರಿ ಕಿಟ್ಟಿ ಹೇಳಿಕೆ

ಮಾರುತಿ ಗೌಡ ಆರೋಗ್ಯ ಇನ್ನು ಚೇತರಿಕೆಯಾಗಿಲ್ಲ. ಎರಡಗಡೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ ಎನ್ನುತ್ತಿದ್ದಾನೆ ಮಾರುತಿ ಗೌಡ. ರಾತ್ರಿಯೆಲ್ಲಾ ಕತ್ತು ತುಂಬಾ ನೋವು ಎನ್ನುತ್ತಿದ್ದ. ಏನು ತಿಂದರು ಮಾರುತಿ ಗೌಡ ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಬಾಯಿಗೆ 14 ಹೊಲಿಗೆ ಹಾಕಿದ್ರು ಊತ ಕಡಿಮೆಯಾಗಿಲ್ಲ. ಮಾರುತಿ ಬಾಯಿ ಹಾಗೂ ತುಟಿ ಮತ್ತಷ್ಟು ಊತುಕೊಂಡಂತಿದೆ. ಸಿಟಿ ಸ್ಕ್ಯಾನ್ ರಿಪೋರ್ಟ್ ಗಾಗಿ ಕಾಯುತ್ತಿದ್ದೇವೆ. 9 ಗಂಟೆಗೆ ಸಿಟಿ ಸ್ಕ್ಯಾನ್ ರಿಪೋರ್ಟ್ ಬಂದಿರಬೇಕು.ನಾವು ಡಿಸಿಎಂ ಭೇಟಿ ಗೆ ಬಂದಿದ್ದೇವೆ.‌ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಮಾರುತಿಗೌಡ ಎಂದು ಪಾನಿಪುರಿ ಕಿಟ್ಟಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version