ಕ್ರೀಡೆ

ನಾಲ್ಕು ವರ್ಷ ಶಿಕ್ಷೆ ಅನುಭವಿಸಿದ್ದ ದೇಶದ ಭರವಸೆ ಆಟಗಾರ್ತಿ ಮೊಗದಲ್ಲಿ ಅರಳಿದ ನಗು

Published

on

ಸುದ್ದಿದಿನ ಡೆಸ್ಕ್: ದೇಹದಲ್ಲಿ ಆಗುತ್ತಿದ್ದ ಹಾರ್ಮೋನ್‌ ಬದಲಾವಣೆ ಕಾರಣಕ್ಕೆ ಸತತ ನಾಲ್ಕು ವರ್ಷಗಳಿಂದ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಟೂರ್ನಿಗಳಿಂದ ವಂಚಿತವಾಗಿದ್ದ ಭಾರತದ ಭರವಸೆಯ ಅಥ್ಲೀಟ್‌ ದ್ಯುತಿ ಚಾಂದ್ ಮೊಗದಲ್ಲಿ ನಗು ಅರಳಿದೆ.
ಅಂತರರಾಷ್ಟ್ರೀಯ ಕ್ರೀಡಾ  ನ್ಯಾಯಾಲಯ ಕಳೆದ ವಾರ ತೀರ್ಪು ನೀಡಿದ್ದು, ದ್ಯುತಿ ಮಂದಹಾಸಕ್ಕೆ ಕಾರಣವಾಗಿದೆ. ದ್ಯುತಿ  ದೇಹದಲ್ಲಿ ಟೆಸ್ಟೊಸ್ಟಿರೊನ್‌ ಎಂಬ ಗ್ರಂಥಿಗಳ ಪ್ರಮಾಣ ಸಾಮಾನ್ಯ ಮಹಿಳೆಗಿಂತ ಹೆಚ್ಚಿವೆ. ಆದ್ದರಿಂದ ಆಕೆ ಓಡುವಾಗ ಪುರುಷರಷ್ಟೇ ಸಾಮರ್ಥ್ಯದಿಂದ ಓಡುತ್ತಾರೆ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ ದೂರಿತ್ತು. ಇದರಿಂದ ನಾಲ್ಕು ವರ್ಷಗಳ ಕಾಲ ಕ್ರೀಡೆಯಿಂದ ದೂರ ಉಳಿಯಬೇಕಾಯಿತು. ಸದ್ಯ‌ಅಂತರರಾಷ್ಟ್ರೀಯ ಕ್ರೀಡಾ  ನ್ಯಾಯಾಲಯ ದ್ಯುತಿ‌ ಪರ ತೀರ್ಪು ನೀಡಿದೆ. ರಿಯೊ ಒಲಿಂಪಿಕ್ಸ್‌ ಕೂಟದ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದ ದ್ಯುತಿ
36 ವರ್ಷಗಳ ಬಳಿಕ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಗೌರವ ಗಳಿಸಿದ್ದರು. ಈಗ ಪ್ರತಿಭಾವಂತ ಆಟಗಾರ್ತಿ ಮತ್ತೆ ಮರಳುತ್ತಿರುವುದು ಭಾರತದ ಭರವಸೆ ಹೆಚ್ಚಿಸಿದೆ.

Leave a Reply

Your email address will not be published. Required fields are marked *

Trending

Exit mobile version