ದಿನದ ಸುದ್ದಿ
ದಾವಣಗೆರೆ | ಕೊರೋನಾದಿಂದ ಒಟ್ಟು 2048 ಮಂದಿ ಸಂಪೂರ್ಣ ಗುಣಮುಖ
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಶುಕ್ರವಾರ 110 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 206 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 02 ಸಾವು ಸಂಭವಿಸಿದೆ.
ಈ ದಿನ ದಾವಣಗೆರೆಯಲ್ಲಿ 74, ಹರಿಹರದಲ್ಲಿ 06, ಜಗಳೂರಿನಲ್ಲಿ 01, ಚನ್ನಗಿರಿ 03, ಹೊನ್ನಾಳಿ 25, ಹಾಗೂ ಅಂತರ್ ಜಿಲ್ಲೆಯಿಂದ 01 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ಶುಕ್ರವಾರ ತಾಲ್ಲೂಕುವಾರು ಬಿಡುಗಡೆಯಾದವರು- ದಾವಣಗೆರೆಯಿಂದ 113, ಹರಿಹರದಿಂದ 17, ಜಗಳೂರಿನಿಂದ06, ಚನ್ನಗಿರಿಯಿಂದ 26, ಹೊನ್ನಾಳಿ 43, ಅಂತರ್‍ಜಿಲ್ಲೆಯಿಂದ 01 ಸೇರಿದಂತೆ ಒಟ್ಟು 206 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 3146 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2048 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 78 ಸಾವು ಸಂಭವಿಸಿದ್ದು, ಪ್ರಸ್ತುತ 1020 ಸಕ್ರಿಯ ಪ್ರಕರಣಗಳು ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243