ದಿನದ ಸುದ್ದಿ
ದಾವಣಗೆರೆ | ಕಂಟೈನ್‍ಮೆಂಟ್ ವಲಯದಲ್ಲಿ 96, ಕ್ವಾರಂಟೈನ್ ನಲ್ಲಿ 03 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು
ಸುದ್ದಿದಿನ, ದಾವಣಗೆರೆ : ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸುರಕ್ಷಾ ವಿಧಾನಗಳೊಂದಿಗೆ ಸರ್ವ ಸಿದ್ದತೆ ಮಾಡಿಕೊಳ್ಳಲಾಗಿದ್ದು ಪೋಷಕರು ನಿರಾಂತಕವಾಗಿ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬೇಕು ಹಾಗೂ ಮಕ್ಕಳು ಸಹ ನಿರಾಂತಕವಾಗಿ ಪರೀಕ್ಷೆಗೆ ಹಾಜರಾಗಬೇಕಿದೆ.
ಜಿಲ್ಲೆಯಲ್ಲಿ 79 ಮುಖ್ಯ ಪರೀಕ್ಷಾ ಕೇಂದ್ರಗಳು ಹಾಗೂ ಹೆಚ್ಚುವರಿಯಾಗಿ 14 ಪರೀಕ್ಷಾ ಕೇಂದ್ರಗಳನ್ನು ಮಾಡಿಕೊಳ್ಳಲಾಗಿದೆ. ಕಂಟೈನ್‍ಮೆಂಟ್ ವಲಯಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಮ್ಮು ಶೀತ, ಜ್ವರದಂತಹ ಪ್ರಕರಣಗಳಿದ್ದಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲು ವ್ಯವಸ್ಥೆ ಮಾಡಲಾಗಿದೆ. ಈವರೆಗೆ ಕಂಟೈನ್‍ಮೆಂಟ್ ವಲಯದ ಒಟ್ಟು 96 ವಿದ್ಯಾರ್ಥಿಗಳಿದ್ದು, 03 ಕ್ವಾರಂಟೈನ್ ವಿದ್ಯಾರ್ಥಿಗಳಿದ್ದಾರೆಂದು ವರದಿಯಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243