ದಿನದ ಸುದ್ದಿ

ಬಿಇ,ಎಂಸಿಎ,ಬಿ.ಟೆಕ್ ಆದವರಿಗೆ ‘ಇ-ಆಸ್ಪತ್ರೆ’ ಕಾರ್ಯಕ್ರಮ ವ್ಯವಸ್ಥಾಪಕರ ಹುದ್ದೆಗೆ ನೇರ ಸಂದರ್ಶನ

Published

on

ಸುದ್ದಿದಿನ,ದಾವಣಗೆರೆ : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಇ-ಆಸ್ಪತ್ರೆಗೆ ಕರ್ತವ್ಯ ನಿರ್ವಹಿಸಲು ಪ್ರೋಗಾಮರ್/ಆಪರೇಷನಲ್ ಮ್ಯಾನೇಜರ್ -01 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಜ.2 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಈ ಹುದ್ದೆಗೆ ಬಿ.ಇ(ಸಿಎಸ್‍ಇ/ಐಎಸ್‍ಇ/ಐಟಿ)/ಎಂಸಿಎ/ಬಿ.ಟೆಕ್(ಸಿಎಸ್/ಐಟಿ) ವಿದ್ಯಾರ್ಹತೆ ಹೊಂದಿರುವ ಹಾಗೂ 2-3 ವರ್ಷದ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಎಸ್.ಎಸ್ ಹಾಸ್ಪಿಟಲ್ ಹತ್ತಿರ, ರಾಮನಗರ ರಸ್ತೆ, ಎನ್.ಸಿ.ಸಿ ಕ್ಯಾಂಪ್ ಪಕ್ಕ, ದಾವಣಗೆರೆ ಇಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ಮೂಲ ಮತ್ತು ನಕಲು (ಸ್ವಯಂ ದೃಢೀಕೃತ ದಾಖಲಾತಿಗಳೊಂದಿಗೆ) ಜಿಲ್ಲಾ ಕುಷ್ಠರೋಗ ಕಚೇರಿಯಲ್ಲಿ ಜನವರಿ 2 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9900920572 ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version