ದಿನದ ಸುದ್ದಿ
ದಾವಣಗೆರೆ | ಇ-ಖಾತಾ ಅಭಿಯಾನ
ಸುದ್ದಿದಿನ,ದಾವಣಗೆರೆ:ಫೆಬ್ರವರಿ 19 ರಿಂದ ಮೇ 10 ರವರೆಗೆ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಇ-ಖಾತಾ ಅಭಿಯಾನವನ್ನು ಆಯೋಜಿಸಲಾಗಿದೆ.
ನಗರದಲ್ಲಿನ ನಿವೇಶನಗಳು, ಕಟ್ಟಡಗಳು ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ಮಾರಾಟ ಮಾಡಿರುವ ನಿವೇಶನ,ಕಟ್ಟಡಗಳಿಗೆ 24 ಸೆಪ್ಟೆಂಬರ್ 2024 ರ ಒಳಗೆ ನೋಂದಣೆಯಾಗಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ 2ಎ ನಮೂನೆ ಸೃಜಿಸಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮಹಾನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂ:08192-234444, ವಾಟ್ಸ್ಪ್ ನಂ: 8277234444 ನ್ನು ಸಂಪರ್ಕಿಸಬೇಕೆAದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243